ವಿಜಯನಗರ : ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಯೋಜನೆ ಮತ್ತು ಸಾಲ ಸೌಲಭ್ಯಗಳನ್ನು ಪಡೆಯಲು ಕ್ರಿಶ್ಚಿಯನ್ ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಿಇಟಿ, ನೀಟ್, ಜೆಇಇ, ಸಿಎಲ್‌ಎ ಮುಂತಾದ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗುವ ಮತ್ತು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ, ಐಟಿಐ, ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ದೊರೆಯಲಿದೆ. (ಸರ್ಕಾರಿ, ಮ್ಯಾನೇಜ್ಮೆಂಟ್ ಹಾಗೂ ಖಾಸಗಿ ಸೀಟುಗಳಿಗೂ ಇದು ಅನ್ವಯಿಸುತ್ತದೆ).
ಸ್ವ-ಸಹಾಯ ಗುಂಪುಗಳ ಸ್ವಯಂ ಉದ್ಯೋಗ ಚಟುವಟಿಕೆಗೆ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಘಟಕವೆಚ್ಚದ ಶೇ. 50 ಅಥವಾ ಗರಿಷ್ಠ ರೂ.2.00 ಲಕ್ಷ ಬ್ಯಾಕ್ ಎಂಡ್ ಸಬ್ಸಿಡಿ ನೀಡಲಾಗುವುದು. ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ರೂ.20 ಲಕ್ಷದವರೆಗೆ ಬಡ್ಡಿರಹಿತ ಸಾಲ ಸಿಗಲಿದ್ದು, ಕೋರ್ಸ್ ಪೂರ್ಣಗೊಂಡ 6 ತಿಂಗಳ ನಂತರ 60 ಕಂತುಗಳಲ್ಲಿ ಮರುಪಾವತಿಸಲು ಅವಕಾಶವಿದೆ (2% ಸೇವಾ ಶುಲ್ಕ ಅನ್ವಯ). 10 ವರ್ಷ ಮೇಲ್ಪಟ್ಟ ಚರ್ಚ್ಗಳ ದುರಸ್ಥಿಗೆ ಗರಿಷ್ಠ ರೂ.50.00 ಲಕ್ಷ, ಆವರಣ ಗೋಡೆ ನಿರ್ಮಾಣಕ್ಕೆ ಗರಿಷ್ಠ ರೂ.25.00 ಲಕ್ಷ, ಸ್ಮಶಾನಗಳ ಅಭಿವೃದ್ಧಿ, ಆವರಣ ಗೋಡೆಗೆ ಗರಿಷ್ಠ ರೂ.30.00 ಲಕ್ಷ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ರೂ.50.00 ಲಕ್ಷದಿಂದ ರೂ.1.00 ಕೋಟಿವರೆಗೆ ಅನುದಾನ ನೀಡಲಾಗುವುದು.
ಎಚ್‌ಐವಿ ಪೀಡಿತರು, ವಿಶೇಷಚೇತನರು, ಅನಾಥರು ಮತ್ತು ವೃದ್ಧರ ಆಶ್ರಮ ಕೇಂದ್ರಗಳನ್ನು ನಡೆಸುತ್ತಿರುವ ಅರ್ಹ ಸ್ವಯಂಸೇವಾ ಸಂಸ್ಥೆಗಳಿಗೆ ಗರಿಷ್ಠ ರೂ.8.00 ಲಕ್ಷದವರೆಗೆ ಸಹಾಯಧನ ಮಂಜೂರು ಮಾಡಲಾಗುವುದು. ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸುಸಜ್ಜಿತ ಫಾಸ್ಟ್ ಫುಡ್ ಟ್ರಕ್, ಮೊಬೈಲ್ ಅಡುಗೆಮನೆ ಯೋಜನೆ ಸಹಾಯಧನ ನೀಡಲಾಗುವುದು.
ಅರ್ಹ ಅಭ್ಯಾರ್ಥಿಗಳು ಜಿಲ್ಲೆಯಲ್ಲಿ ಕನಿಷ್ಠ 15 ವರ್ಷಗಳ ಖಾಯಂ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಿರಬಾರದು. 18 ರಿಂದ 55 ವರ್ಷ ಒಳಗಿರಬೇಕು. ಶೇ. 33 ರಷ್ಟು ಮಹಿಳೆಯರಿಗೆ ಹಾಗೂ ಶೇ. 3 ರಷ್ಟು ವಿಶೇಷಚೇತನರಿಗೆ ಮೀಸಲಾತಿ ಇರುತ್ತದೆ. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಇಲಾಖೆ ಅಧಿಕೃತ ಜಾಲಾತಣ kccdconline.karnataka.
Leave a comment