ವಿಜಯನಗರ : ನಗರದ ಎಂ.ಬಿ.ಎಸ್ ಏರಿಯಾ ಜೆ.ಪಿ ನಗರ 24ನೇ ವಾರ್ಡ್ ನಿವಾಸಿ ಕರುಣಾ ಗಂಡ ಶ್ರೀನಿವಾಸ ರೆಡ್ಡಿ (ಸು.52ವರ್ಷದ) ಮಹಿಳೆ ಕಾಣೆಯಾಗಿದ್ದು, ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಕರುಣಾ ಸುಮಾರು 5.4 ಅಡಿ ಎತ್ತರ, ಕೊಲುಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುವಳು. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಬ್ಲೌಜ್ ಹಾಗೂ ಹಸಿರು ಬಣ್ಣದ ಸೀರೆ ಧರಿಸಿರುತ್ತಾಳೆ. ಈ ಮೇಲ್ಕಂಡ ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪಟ್ಟಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment