Home ನಿಚ್ಚಾಪುರ ಕೆರೆಯಲ್ಲಿ ಮಣ್ಣು ಎತ್ತುವುದನ್ನು ತಡೆಯೋರು ಯಾರು ?
Homeಸುದ್ದಿಗಳು

ನಿಚ್ಚಾಪುರ ಕೆರೆಯಲ್ಲಿ ಮಣ್ಣು ಎತ್ತುವುದನ್ನು ತಡೆಯೋರು ಯಾರು ?

Share
ನಿಚ್ಚಾಪುರ ಕೆರೆಯಲ್ಲಿ ಮಣ್ಣು ಎತ್ತುವುದನ್ನು ತಡೆಯೋರು ಯಾರು ?
Share

ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಿಚ್ಚಾಪುರ ಕೆರೆಯಲ್ಲಿ ವ್ಯಾಪಕವಾಗಿ ಮಣ್ಣು ಅಗೆಯುತ್ತಿರುವುದು ಗೊತ್ತಿದ್ದರೂ ಗೊತ್ತಿಲ್ಲದಂತೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ, ಮಣ್ಣು ಎತ್ತುವವರಿಂದ ದೇಣಿಗೆ ವಸೂಲಿಯು ಎಗ್ಗಿಲ್ಲದೇ ನಡೆದಿದೆ. ಇದನ್ನು ತಡೆಯುವವರು ಯಾರು ?..  

ನಿಚ್ಚಾಪುರದಲ್ಲಿ ಕೆಲವು ವರ್ಷಗಳ ಹಿಂದೆ ರೈತರ ಜಮೀನುಗಳ ಸ್ವಾಧೀನ ಪಡಿಸಿಕೊಂಡು ಸರ್ವೆ ನಂಬರ್ 234ರ ವ್ಯಾಪ್ತಿಯಲ್ಲಿ ಸುಸಜ್ಜಿತ ಕೆರೆ ನಿರ್ಮಿಸಲಾಗಿದೆ. ಈ ಕೆರೆಗೆ ಚಿಗಟೇರಿ ಅರಣ್ಯ, ಗುಡ್ಡದ ಮೂಲಕ ನೀರು ಹರಿದು ಬರುತ್ತದೆ. ಅರಣ್ಯ ಪ್ರದೇಶಕ್ಕೆ ಹೋಗುವ ದಾರಿ ಮೂಲಕ ವಾಹನಗಳು ಸಂಚಾರ ಮಾಡುತ್ತಿರುವ ಕಾರಣ, ಯಾರಿಗೂ ಕಾಣುವುದಿಲ್ಲ. ಇದನ್ನೆ ಬಳಸಿಕೊಂಡಿರುವ ಜೆಸಿಬಿ ಯಂತ್ರಗಳು ಕೆರೆಯಂಗಳಕ್ಕೆ ದಾಂಗುಡಿ ಇಟ್ಟು, ಎಲ್ಲೆಂದರಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಅನೇಕ ರೈತರು ದೂರಿದ್ದಾರೆ.

ಮಣ್ಣು ಅಗೆಯುತ್ತಿರುವುದರಿಂದ ಕೆರೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಈ ಕೆರೆಗೆ ಮಳೆಗಾಲದಲ್ಲಿ ಚಿಗಟೇರಿ ಗುಡ್ಡದಿಂದ ನೀರು ಹರಿದು ಸಂಗ್ರಹವಾಗುತ್ತದೆ. ಕೆರೆ ಕಟ್ಟಿದಾಗಿನಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾದರೆ, ಕೊಳವೆಬಾವಿಯಲ್ಲಿ ಅಂತರ್ಜಲ ವೃದ್ದಿಯಾಗುತ್ತದೆ. ಈಗ ಈ ಕೆರೆಯಲ್ಲಿ 6 ರಿಂದ 8 ಅಡಿ ಆಳದವರೆಗೆ ಭೂಮಿ ಅಗೆದು ಮಣ್ಣು ಹೊರತೆಗೆದು ಅಕ್ರಮವಾಗಿ ಮಾರಾಟ ಮಾಡಿ ಸಾಗಿಸುತ್ತಿರುವುದು, ಕೆರೆಯ ಗುಣಮಟ್ಟಕ್ಕೆ ದಕ್ಕೆಯಾಗುತ್ತದೆ.

ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಯಾವುದೇ ಇಲಾಖೆ ಅನುಮತಿ ಪಡೆದಿಲ್ಲ, ಕಾಯ್ದೆ ಉಲ್ಲಂಘಿಸಿ ತಾಲ್ಲೂಕಿನ ತಾಲ್ಲೂಕಿನಲ್ಲಿ ಮರಳು, ಮಣ್ಣು ಮಾರಾಟ ದಂಧೆ ನಡೆಸಿದರೆ ನಿಯಂತ್ರಿಸಬೇಕು. ದೇವಸ್ಥಾನ ಕಟ್ಟಿಸುವ ನೆಪದಲ್ಲಿ ಹಣ ಎತ್ತುತ್ತಿರುವವರ ವಿರುದ್ದವೂ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಜಮೀನಿಗೆ ಫಲವತ್ತಾದ ಮಣ್ಣು ಎತ್ತುವ ನೆಪದಲ್ಲಿ ನಿತ್ಯ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿವರೆಗೂ ವ್ಯಾಪಕವಾಗಿ ಮಣ್ಣು ಸಾಗಾಣೆ ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಕೆರೆಗಳ ಗುಣಮಟ್ಟ ಹಾಳಾಗುತ್ತವೆ ಅನಧಿಕೃತವಾಗಿ ಮಣ್ಣು ಎತ್ತುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ರೈತರಾದ ಮಾಲತೇಶ್, ಈರಣ್ಣ, ರಶೀದ್, ಕಿರಣ್ ಮಾತನಾಡಿ, ಮಣ್ಣು ತುಂಬುವ ಜೆಸಿಬಿ ಯಂತ್ರದ ಮಾಲಕರು ಟ್ರಾಕ್ಟರ್‍ ವೊಂದಕ್ಕೆ ರೂ.200 ಹಾಗೂ ಆಂಜನೇಯ ದೇವಸ್ಥಾನ ಸಮಿತಿಯು ರೂ.500 ಹಣ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆಗೆ ಹೋಗುವ ಕಾಲುದಾರಿ ಬಳಸಿಕೊಂಡು ಲಾರಿಗಳ ಮೂಲಕ ಮಣ್ಣು ಏರಲಾಗುತ್ತಿದೆ. ಇದನ್ನು ತಡೆಯಬೇಕಾಗಿದ್ದ ಗ್ರಾಮದ ಕೆಲವರು, ದೇಣಿಗೆ ವಸೂಲಿಗೆ ಇಳಿದಿದ್ದಾರೆ. ದೇವಸ್ಥಾನ ಕಟ್ಟಲು ನಮ್ಮ ಅಭ್ಯಂತರವಿಲ್ಲ. ಅದರ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ನಿಲ್ಲಿಸಬೇಕು. ರೈತರಿಗೆ ಅನುಕೂಲ ಆಗುವಂತೆ ಶುಲ್ಕ ನಿಗಧಿಪಡಿಸಬೇಕು ಎಂದು ಒತ್ತಾಯಿಸಿದರು.

‘ನಮ್ಮ ಗಮನಕ್ಕೆ ಬಂದ ತಕ್ಷಣವೇ ಮಣ್ಣು ಅಗೆದವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಮೌಖಿಕವಾಗಿ ಸೂಚನೆ ನೀಡಲಾಗಿತ್ತು. ಪುನಃ ಮುಂದುವರೆಸುತ್ತಿರುವ ಬಗ್ಗೆ ಖಿಚಿತ ಮಾಹಿತಿ ದೊರೆತರೆ ಮಣ್ಣು ಎತ್ತುವ ಮತ್ತು ಹಣ ಸಂಗ್ರಹಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’.

ಬಿ.ವಿ.ಗಿರೀಶ್‌ ಬಾಬು, ತಹಶೀಲ್ದಾರ, ಹರಪನಹಳ್ಳಿ.

‘ಕೆರೆ ಅಂಗಳದಲ್ಲಿ ಮಣ್ಣು ಅಗೆಯುತ್ತಿರುವ ಮತ್ತು ಅದರ ಹೆಸರಿನಲ್ಲಿ  ಹಣ ವಸೂಲಿ ಮಾಡುತ್ತಿರುವವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು. ಕೂಡಲೇ ಕೆರೆಯನ್ನು ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಆಡಳಿತದ ಸುಪರ್ದಿಗೆ ವಹಿಸಬೇಕು’.

ಎಚ್.ಎಂ.ಸಂತೋಷ, ಜಿಲ್ಲಾ ಕಾರ್ಯದರ್ಶಿ, ಭಾರತ ಕಮ್ಯುನಿಷ್ಟ್ ಪಕ್ಷ, ವಿಜಯನಗರ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಉಪ್ಪಾರ ನೌಕರರಿಂದ ಪ್ರತಿಭಾ ಪುರಸ್ಕಾರ

ಹರಪನಹಳ್ಳಿ: ಹಬ್ಬ ಹರಿದಿನಗಳ ಆಚರಣೆಯಲ್ಲಿ ಮೇಲ್ವರ್ಗದ ಸಮುದಾಯಗಳಿಗಿಂತ ಶೋಷಿತ ವರ್ಗದವರೇ ಹೆಚ್ಚು ದುಂದುವೆಚ್ಚ ಮಾಡುತ್ತಿರುವುದು ಕಳವಳಕಾರಿ...

Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.