ಬೆಂಗಳೂರು : ರಸ್ತೆ ಅಪಘಾತದಲ್ಲಿ ಮೃತಪಟ್ಡಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ ಅನುಕಂಪದ ಆಧಾರ ಮೇಲೆ ರಾಜ್ಯ ಸರ್ಕಾರಕೆಲಸ ನೀಡಿದೆ.
ಸೇವೆಯಲ್ಲಿರುವಾಗ 2025, ನ.25ರಂದು ಮಹಾಂತೇಶ್ ಬೀಳಗಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪುತ್ರಿ ಚೈತನ್ಯಾ ಎಂ.ಬೀಳಗಿ ಅವರಿಗೆ ಕರ್ನಾಟಕ ನಾಗರೀಕಾ ಸೇವಾ ನಿಯಮದ ಪ್ರಕಾರ ಸರ್ಕಾರದ ಸಚಿವಾಲಯದಲ್ಲಿನ ವೇತನ ಶ್ರೇಣಿ 49050-1250-52800-1375-58300-1500-64300-1650-74200-1900-85600-2300-925000) ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ಹಾಗೂ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕ ಮಾಡಿದೆ. ನೇಮಕಾತಿ ಆದೇಶದಲ್ಲಿ ನಿಬಂಧನೆಗಳಿವೆ.
ಷರತ್ತು ಮತ್ತು ನಿಬಂಧನೆಗಳು:
- ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 18 ರನ್ವಯ, ನೇಮಕಾತಿ ಆದೇಶವನ್ನು ತುರ್ತು ಅಂಚೆ ಮೂಲಕ ಹೊರಡಿಸಿದ 15 ದಿವಸಗಳ ಒಳಗಾಗಿ, ಅಭ್ಯರ್ಥಿಯು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ-1), ಕೊಠಡಿ ಸಂಖ್ಯೆ:428, 4ನೇ ಮಹಡಿ, ಬಹುಮಹಡಿ ಕಟ್ಟಡ, ಡಾ।। ಬಿ. ಆರ್. ಅಂಬೇಡ್ಕರ್ ಬೀದಿ. ಬೆಂಗಳೂರು-01, ಇವರ ಮುಂದೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
- ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 10 ರನ್ವಯ, ಅಭ್ಯರ್ಥಿಯ ಸಂಬಂಧಿಕರಲ್ಲದ ಅವರು ವ್ಯಾಸಂಗ ಮಾಡಿದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಸಂಬಂಧಪಡದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣಪತ್ರವನ್ನು ಸಲ್ಲಿಸುವುದು,
Leave a comment