ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಭಾಗವು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನೈಲಿಟ್ ಸಂಸ್ಥೆಯ ಸಹಯೋಗದೊಂದಿಗೆ ‘ಇ-ಚಿಪ್‌ಹಬ್’ ವೇದಿಕೆಯ ಮೂಲಕ ಆಯೋಜಿಸಿರುವ 90 ಗಂಟೆಗಳ “ಚಿಪ್‌ಕ್ರಾಫ್ಟ್: ಖಖಿಐ, IP ಇಂಟಿಗ್ರೇಷನ್ ಮತ್ತು ಸೈನ್‌ಆಫ್” ತರಬೇತಿ ಕಾರ್ಯಕ್ರಮಕ್ಕೆ ಜುಲೈ 27 ರಂದು ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಒಟ್ಟು ೩೧೪ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಬಿ.ಐ.ಇ.ಟಿ. ಕಾಲೇಜಿನ ಇ&ಅಇ ವಿಭಾಗದ 144 ವಿದ್ಯಾರ್ಥಿಗಳು, ಇ & ಇ ಇ ವಿಭಾಗದ ೪೯ ವಿದ್ಯಾರ್ಥಿಗಳು; ದಾವಣಗೆರೆಯ ಯು.ಬಿ.ಡಿ.ಟಿ.ಸಿ.ಇ. ಕಾಲೇಜಿನ ಇ&ಅಇ ವಿಭಾಗದ 33 ವಿದ್ಯಾರ್ಥಿಗಳು, ಇ,ಐ ವಿಭಾಗದ 61 ವಿದ್ಯಾರ್ಥಿಗಳು ಹಾಗೂ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಇ&ಅಇ ವಿಭಾಗದ 27 ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂಸ್ಥೆಗಳ ನಿಕಾಯ ಸಂಯೋಜಕರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಡಾ. ಜಿ. ಎಸ್. ಸುನೀತಾ ಅವರು, ಸೆಮಿಕಂಡಕ್ಟರ್ ತಂತ್ರಜ್ಞಾನದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ವಿ.ಎಲ್.ಎಸ್.ಐ. ಮತ್ತು ಚಿಪ್ ಡಿಸೈನಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನುರಿತ ವೃತ್ತಿಪರರ ಬೇಡಿಕೆಯನ್ನು ಪೂರೈಸಲು ಉದ್ಯೋಗ ಆಧಾರಿತ ಕೌಶಲ್ಯಾಭಿವೃದ್ಧಿಯ ಅಗತ್ಯವನ್ನು ಅವರು ಪ್ರತಿಪಾದಿಸಿದರು. ವಿದ್ಯಾರ್ಥಿಗಳು ಈ ಪ್ರಾಯೋಗಿಕ ತರಬೇತಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಜ್ಜಾಗಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥ್ ನಾಯಕ್ ಮಾತನಾಡಿ, ಈ ಪ್ರಮಾಣಪತ್ರ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ದೊರೆಯುವ ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಸೆಮಿಕಂಡಕ್ಟರ್ ಮತ್ತು GISI ಕ್ಷೇತ್ರಗಳಲ್ಲಿ ನುರಿತ ವೃತ್ತಿಪರರಿಗೆ ಇರುವ ಅಪಾರ ಬೇಡಿಕೆ ಹಾಗೂ ಚಿಪ್ ಡಿಸೈನಿಂಗ್ ಮತ್ತು ಸಂಬಂದಿತ ಉದ್ಯಮಗಳಲ್ಲಿರುವ ಅವಕಾಶಗಳನ್ನು ಅವರು ಬೆಳಕಿಗೆ ತಂದರು. ಈ ಪ್ರಮಾಣಪತ್ರವು ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲಿದ್ದು, ಎಎಮ್‌ಡಿ, ಕ್ವಾಲ್ಕಾಮ್, ಇಂಟೆಲ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಸಿನೋಪ್ಸಿಸ್ ನಂತಹ ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಹೆಚ್. ಬಿ. ಅರವಿಂದ್ ಮತ್ತು ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ ಅವರು, ಪ್ರಸ್ತುತ ಕಾಲದ ಅತ್ಯಂತ ಅಗತ್ಯ ಕ್ಷೇತ್ರವಾದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೈಲಿಟ್ ಒದಗಿಸಿರುವ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಡಾ. ಜಿ. ಎಸ್. ಸುನೀತಾ ಅವರು, ವಿದ್ಯಾರ್ಥಿಗಳಿಗೆ ಈ ಮೌಲ್ಯಯುತ ತರಬೇತಿ ಅವಕಾಶವನ್ನು ನೀಡಿದ್ದಕ್ಕಾಗಿ ನೈಲಿಟ್ ಮತ್ತು ಇ-ಚಿಪ್‌ಹಬ್ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು ಹಾಗೂ ಉನ್ನತ ತಾಂತ್ರಿಕ ಶಿಕ್ಷಣ ಮತ್ತು ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಪ್ರೋತ್ಸಾಹಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
- Bapuji Engineering College
- BIET Davangere
- Chip Designing
- ChipCraft
- Davangere
- e-ChipHub
- NIELIT
- Semiconductor Technology
- Skill Development
- Technical Education
- Training Workshop
- VLSI
- ಇ-ಚಿಪ್‌ಹಬ್
- ಕೌಶಲ್ಯಾಭಿವೃದ್ಧ
- ಚಿಪ್ ಡಿಸೈನಿಂಗ್
- ಚಿಪ್‌ಕ್ರಾಫ್ಟ್
- ತರಬೇತಿ ಕಾರ್ಯಕ್ರಮ
- ತಾಂತ್ರಿಕ ಶಿಕ್ಷಣ
- ದಾವಣಗೆರೆ
- ನೈಲಿಟ್
- ಬಾಪೂಜಿ ಇಂಜಿನಿಯರಿಂಗ್ ಕಾಲೇಜು
- ಬಿಐಇಟಿ
- ವಿಎಲ್ಎಸ್ಐ
- ಶಿಕ್ಷಣ
- ಸೆಮಿಕಂಡಕ್ಟರ್
Leave a comment