Home ಕ್ರೀಡೆ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ; ಕೋಡಿಹಳ್ಳಿ ಭೀಮಪ್ಪ
ಕ್ರೀಡೆ

ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ; ಕೋಡಿಹಳ್ಳಿ ಭೀಮಪ್ಪ

Share
kodihalli bheemappa,Harapanahalli,shantinagara
Share

ಹರಪನಹಳ್ಳಿ : ಕಬ್ಬಡ್ಡಿ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಹರಪನಹಳ್ಳಿ ಕಾಂಗ್ರೆಸ್‌ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಶಾಂತಿನಗರದಲ್ಲಿ  ಸೇವಾಲಾಲ್  ಅಂಬೇಡ್ಕರ ಸ್ಪೋರ್ಟ್ಸ್  ಕ್ಲಬ್ ವತಿಯಿಂದ ರಾಜ್ಯಮಟ್ಟದ  ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಇಂತಹ ದೇಸಿ ಕ್ರೀಡೆಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲ ಅನಂತನಾಯ್ಕ ಮಾತನಾಡಿ, ಸಂವಿಧಾನ ಶಿಲ್ಪಿ ಡಾ,ಬಿ,ಆರ್.ಅಂಬೇಡ್ಕರ ನಮ್ಮೆಲ್ಲರಿಗೂ ಸ್ಪೂರ್ತಿ ತುಂಬಿದ್ದಾರೆ. ಅವರ ತತ್ವಾದರ್ಶ ಪಾಲಿಸುತ್ತಾ ನಾವೆಲ್ಲರೂ ಜೀವನ ರೂಪಿಸಿಕೊಳ್ಳಬೇಕು. ಕಬ್ಬಡ್ಡಿ ದೇಸಿ ಆಟ ಉಳಿಸಿ, ಬೆಳೆಸುವ ಕೆಲಸ ಆಗಬೇಕು ಎಂದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚೆಂಗೆಪ್ಪ ಮಾತನಾಡಿ,   ವಿದ್ಯಾರ್ಥಿ ಯುವಜನತೆ ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದ ಅಭಿರುಚಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ದಾವಣಗೆರೆ ರಂಗಾಯಾಣ ನಿರ್ದೆಶಕ ಮಲ್ಲಿಕಾರ್ಜುನ ಕಡಕೋಳ್, ಮಜ್ದೂರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಲ್ .ಪ್ರಕಾಶ ನಾಯ್ಕ,   ಮುಖಂಡರಾದ ಉಮೇಶನಾಯ್ಕ, ನೇಮಿರಾಜನಾಯ್ಕ, ಗಣೇಶನಾಯ್ಕ, ಪರುಶುರಾಮ, ಎಂ.ಕೆಂಚಪ್ಪ, ಶೇಖರನಾಯ್ಕ, ಧರ್ಮಪ್ಪ, ಭೋಜ್ಯನಾಯ್ಕ, ತೀರ್ಪುಗಾರರಾದ ಜಗದೀಶ. ನಾಗರಾಜ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಕ್ರೀಡೆ

ಹರಪನಹಳ್ಳಿ : ಸಮತ ರೆಸಾರ್ಟ್‍ನಲ್ಲಿ ವಿಚಾರಗೋಷ್ಠಿ

ಹರಪನಹಳ್ಳಿ : ರಾಜಕೀಯ ಪ್ರಜಾಪ್ರಭುತ್ವ ದುರ್ಬಳಕೆ ಆಗುತ್ತಿದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಜಾತಿ ಮೇಲೆ...

Homeಕ್ರೀಡೆ

ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ

ಹರಪನಹಳ್ಳಿ : ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣನವರು ತಮ್ಮ...

renukadevi
Homeಕ್ರೀಡೆ

ಪರಿಸರ ಜಾಗೃತಿಗಾಗಿ ದಾವಣಗೆರೆಯಲ್ಲಿ ಸೈಕಲ್ ಜಾಥಾ

ದಾವಣಗೆರೆ  : ಯುವಜನರು ಮತ್ತು ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ...

kannada
Homeಕ್ರೀಡೆ

ಹರಪನಹಳ್ಳಿಯಲ್ಲಿ ಗಮನ ಸೆಳೆದ ಬೀಳ್ಕೊಡುಗೆ

ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.