Home ಸುದ್ದಿಗಳು  ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್‍ ತೆರೆಯಲು ಆಗ್ರಹ
ಸುದ್ದಿಗಳು

 ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್‍ ತೆರೆಯಲು ಆಗ್ರಹ

Share
ಪತ್ರ ಬರಹಗಾರರ ಒಕ್ಕೂಟ, ಹರಪನಹಳ್ಳಿ
Share

 ಹರಪನಹಳ್ಳಿ : ರಾಜ್ಯದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ಪತ್ರ ಬರಹಗಾರರ ಒಕ್ಕೂಟದ ಕಾರ್ಯಕರ್ತರು ಬುಧವಾರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಉಪ ನೋಂದಾಣಾಧಿಕಾರಿಗಳು ಹಾಗೂ ವಿವಾಹ ನೊಂದಣಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು, ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿದರು. ನೋಂದಾವಣೆ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು, ಪತ್ರ ಬರಹಗಾರರಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ನೀಡಬೇಕು. ಕಾವೇರಿ 0.2ರಲ್ಲಿ ಆಗಿರುವ ಆಸ್ತಿ ವಿವರಣೆಯಲ್ಲಿ ಬಡಾವಣೆ ಹೆಸರು, ಸರ್ವೆ ನಬರ್, ಸೈಟ್ ನಂಬರ್, ಡೋರ್ ನಂಬರ್ ಅಳತೆ ಇವುಗಳನ್ನು ನಮೂದಿಸಿ ನೊಂದಣಿ ಮಾಡಿಸಲಾಗುತ್ತಿತ್ತು. ಈಗ ಸರ್ಕಾರ ಅಪ್ ಲೋಡ್‍ ನಲ್ಲಿನೇರವಾಗಿ ಆಸ್ತಿ ವಿವರಣೆ ದಾಖಲಾಗುವಂತೆ ಮತ್ತು ಯಾವುದೇ ತಿದ್ದುಪಡಿ ಮಾಡಲು ಬಾರದಂತೆ ಮಾಡಿರುವುದು ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಂಘದ ಅಧ್ಯಕ್ಷ ಡಂಕಿ ಇಮ್ರಾನ್, ಕೆ.ಎಂ.ರೇವಣಸಿದ್ದಯ್ಯ, ಕೆ.ಎಂ.ಲಿಂಗರಾಜ್, ಎಸ್.ಎಂ.ಮಂಜುನಾಥ, ವೆಂಕಟೇಶ್, ಎಂ.ಬಿ.ಸಿದ್ದು, ಡಂಕಿ ಮೆಹಬೂಬ್ ಸಾಬ್, ಮಂಜುನಾಥ್ ಹಾಗೂ ಸಂಘದ ಪದಾಧಿಕಾರಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ

ಬಳ್ಳಾರಿ : ಜಿಲ್ಲೆಯ ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ...

ಹರಪನಹಳ್ಳಿ ಪೊಲೀಸ್‌
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಪೊಲೀಸರ ‘ಕಾಲ್ನಡಿಗೆ ಗಸ್ತು’

ಹರಪನಹಳ್ಳಿ : ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಪೊಲೀಸ್ ಇಲಾಖೆ ಒಂದು ಸೂಪರ್...

dc hosapete
Homeಸುದ್ದಿಗಳು

ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ – ಕವಿತಾ ಎಸ್. ಮನ್ನಿಕೇರಿ ಖಡಕ್ ಎಚ್ಚರಿಕೆ

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕುಂಠಿತಗೊಂಡಿರುವ 7ನೇ ಸಣ್ಣ ನೀರಾವರಿ ಹಾಗೂ 2ನೇ ಜಲಮೂಲಗಳ ಗಣತಿಯನ್ನು ಸರ್ಕಾರದ...

harapanahallipdo
ಸುದ್ದಿಗಳು

ಪಂಚಾಯತ್ ಇಲಾಖೆ ನೌಕರರ ಸಂಘಕ್ಕೆ ಆಯ್ಕೆ

ಹರಪನಹಳ್ಳಿ :  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಇಲಾಖೆಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಹಲವಾಗಲು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.