ಹರಪನಹಳ್ಳಿ : ಇಲ್ಲಿಯ ಗೋಸಾವಿ ಗುಡ್ಡದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯ ಕಟ್ಟಡಕ್ಕೆ ಗುರುವಾರ ವಿಜಯನಗರ ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯದೀಶ ಕೆ.ಎಂ.ರಾಜಶೇಖರ ಅವರು ಬೇಟಿ ನೀಡಿ ಪರಿಶೀಲಿಸಿದರು.
ನಗರ ನೂತನ ನ್ಯಾಯಾಲಯ ಕಟ್ಟಡ ಗುರುವಾರ ಆಗಮಿಸಿದ್ದ ಅವರು, ʼಗೋಸಾವಿ ಗುಡ್ಡದಲ್ಲಿ ನಿರ್ಮಿಸಿರುವ ಕಟ್ಟಡ ವೀಕ್ಷಿಸಲಾಗಿದೆ. ಕಟ್ಟಡ ಶೀಘ್ರ ಆರಂಭಿಸುವ ಬಗ್ಗೆ ಕ್ರಮ ವಹಿಸುವುದಾಗಿʼ ಅವರು ತಿಳಿಸಿದರು. ಇದೆ ವೇಳೆ ನ್ಯಾಯಾಲಯ ಆವರಣದಲ್ಲಿ ಸಸಿ ನೆಡಲಾಯಿತು. ಹಿರಿಯ ಸಿವಿಲ್ ನ್ಯಾಯಧೀಶೆ ಆರ್.ಉಷಾರಾಣಿ, ಸಿವಿಲ್ ನ್ಯಾಯಧೀಶ ಮನುಶರ್ಮಾ, ಹಿರಿಯ ವಕೀಲ ಕೆ.ಜಗದಪ್ಪ, ರಾಮನಗೌಡ, ಮತ್ತಿಹಳ್ಳಿ ಅಜ್ಜಣ್ಣ, ವಕೀಲರ ಸಂಘದ ಮಂಜುನಾಥ ಬಾಗಳಿ, ಮಲ್ಲಪ್ಪ, ಹಾಗೂ ವಕೀಲರು ಇದ್ದರು.
Leave a comment