ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ದುರ್ಗಾಂಭಿಕ ದೇವಿ ಹಾಗೂ ಚೌಡಮ್ಮ ದೇವಿ ಕಾರ್ತಿಕೋತ್ಸವ ಅದ್ದೂರಿಯಾಗಿ ನೆರವೇರಿತು.
ಮಂಗಳವಾರ ದುರ್ಗಮ್ಮ ಹಾಗೂ ಚೌಡಮ್ಮ ದೇವಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಬುಧವಾರ ಬೆಳಿಗ್ಗೆ ದುರ್ಗಾಭಿಕ ದೇವಿಯನ್ನು ಹೊಳೆಗೆ ಕರೆತಂದು ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಆರಂಭವಾಗುವ ಮೆರವಣಿಗೆಯಲ್ಲಿ ಡೊಳ್ಳು, ಸಮ್ಮಾಳ, ಹಲಗೆ ಮೇಳ ಸಂಭ್ರಮಿಸಿದವು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ ಮಾತನಾಡಿ, ಪ್ರತಿ ವರ್ಷ ದೇವಿಯ ಕಾರ್ತಿಕೋತ್ಸವದಲ್ಲಿ ಭಕ್ತರು ಕೊಡುವ ಪದಾರ್ಥಗಳನ್ನು ದೇವಸ್ಥಾನದ ದುರ್ಗೆಯರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ದೇವಿ ಅಲಂಕರಿಸಿ, ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ಪೂಜಿ ಸಲಾಗುವುದು ಎಂದರು. ಕುರುಬ ಸಮುದಾಯ ದೇವಿಗೆ ಕುಂಭದಲ್ಲಿ ಕುರಿ ಹಾಲು ನೈವೇಧ್ಯ ಅರ್ಪಿಸುತ್ತಾರೆ. ರಾತ್ರಿ ಭಜನೆ, ಕೋಲಾಟದ ಪರಿಸೆ ನಡೆಯುತ್ತದೆ ಎಂದು ಹೇಳಿದರು. ಟಿ.ವಿ.ಕೆಂಚಪ್ಪ ಮಾತನಾಡಿ, ದೇವಸ್ಥಾನದ ಅಭಿವೃದ್ದಿ ಸರ್ಕಾರ ಅನುದಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪಟ್ಟದ ಪೂಜಾರಿ ದಂಡೆಪ್ಪ, ಹೆಚ್.ಬಸಪ್ಪ, ಟೀವಿ ಕೆಂಚಪ್ಪ, ಕಡ್ಲೆಪ್ಪ, ಪೂಜಾರಿ ಅಂಜಿನಪ್ಪ, ಎಸ್.ಕುಮಾರ್, ತಿಪ್ಪೇಶ್, ಕರೆಡಪ್ಪ, ಸಿದ್ದಪ್ಪ, ದಡೇರಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳಿದ್ದರು.
Leave a comment