Home ಸುದ್ದಿಗಳು ಉಚ್ಚಂಗಿದುರ್ಗ : ದುರ್ಗಮ್ಮ, ಚೌಡಮ್ಮ ದೇವಿ ಕಾರ್ತಿಕೋತ್ಸವ
ಸುದ್ದಿಗಳು

ಉಚ್ಚಂಗಿದುರ್ಗ : ದುರ್ಗಮ್ಮ, ಚೌಡಮ್ಮ ದೇವಿ ಕಾರ್ತಿಕೋತ್ಸವ

Share
ಉಚ್ಚಂಗಿದುರ್ಗ : ದುರ್ಗಮ್ಮ, ಚೌಡಮ್ಮ ದೇವಿ ಕಾರ್ತಿಕೋತ್ಸವ
Share

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ದುರ್ಗಾಂಭಿಕ ದೇವಿ ಹಾಗೂ ಚೌಡಮ್ಮ ದೇವಿ ಕಾರ್ತಿಕೋತ್ಸವ ಅದ್ದೂರಿಯಾಗಿ ನೆರವೇರಿತು.

ಮಂಗಳವಾರ ದುರ್ಗಮ್ಮ ಹಾಗೂ ಚೌಡಮ್ಮ ದೇವಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಬುಧವಾರ ಬೆಳಿಗ್ಗೆ ದುರ್ಗಾಭಿಕ ದೇವಿಯನ್ನು ಹೊಳೆಗೆ ಕರೆತಂದು ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಆರಂಭವಾಗುವ ಮೆರವಣಿಗೆಯಲ್ಲಿ ಡೊಳ್ಳು, ಸಮ್ಮಾಳ, ಹಲಗೆ ಮೇಳ ಸಂಭ್ರಮಿಸಿದವು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಮಡ್ರಳ್ಳಿ ಕೆಂಚಪ್ಪ ಮಾತನಾಡಿ, ಪ್ರತಿ ವರ್ಷ ದೇವಿಯ ಕಾರ್ತಿಕೋತ್ಸವದಲ್ಲಿ ಭಕ್ತರು ಕೊಡುವ ಪದಾರ್ಥಗಳನ್ನು ದೇವಸ್ಥಾನದ ದುರ್ಗೆಯರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ದೇವಿ ಅಲಂಕರಿಸಿ, ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ಪೂಜಿ ಸಲಾಗುವುದು ಎಂದರು. ಕುರುಬ ಸಮುದಾಯ ದೇವಿಗೆ ಕುಂಭದಲ್ಲಿ ಕುರಿ ಹಾಲು ನೈವೇಧ್ಯ ಅರ್ಪಿಸುತ್ತಾರೆ. ರಾತ್ರಿ ಭಜನೆ, ಕೋಲಾಟದ ಪರಿಸೆ ನಡೆಯುತ್ತದೆ ಎಂದು ಹೇಳಿದರು. ಟಿ.ವಿ.ಕೆಂಚಪ್ಪ ಮಾತನಾಡಿ, ದೇವಸ್ಥಾನದ ಅಭಿವೃದ್ದಿ ಸರ್ಕಾರ ಅನುದಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.  ಪಟ್ಟದ ಪೂಜಾರಿ ದಂಡೆಪ್ಪ, ಹೆಚ್.ಬಸಪ್ಪ, ಟೀವಿ ಕೆಂಚಪ್ಪ, ಕಡ್ಲೆಪ್ಪ, ಪೂಜಾರಿ ಅಂಜಿನಪ್ಪ, ಎಸ್.ಕುಮಾರ್, ತಿಪ್ಪೇಶ್, ಕರೆಡಪ್ಪ, ಸಿದ್ದಪ್ಪ, ದಡೇರಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.