ಹರಪನಹಳ್ಳಿ : ದೇವಿರಮ್ಮ ರಂಗ ಚಾವಡಿಯಲ್ಲಿ ನಿರ್ದಿಗಂತ ತಂಡ ಉಚಿತವಾಗಿ ಪ್ರದರ್ಶಿಸಿದ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ತೆರಿಗೆಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟವನ್ನು ನಾಟಕ ಬಿಂಬಿಸಿತು.
ಆದರ್ಶ ಮಹಿಳಾ ಮಂಡಳಿ ಸಹಯೋಗದಲ್ಲಿ ಜರುಗಿದ ನಾಟಕದಲ್ಲಿ ರಂಗ ಕಲಾವಿದರಾದ ಹುಬ್ಬಳ್ಳಿ ಮಂಜುನಾಥ ಉಪ್ಪಾರ, ಧಾರವಾಡ ಸಲ್ಮಾ ದಂಡಿನ್, ಮಂಗಳೂರು ಚರಿತ್ ಸುವರ್ಣ, ಶಿವಮೊಗ್ಗ ದಿನೇಶ್ ನಾಯ್ಕ, ಚರಿತ್ ಶಾರದಾ ಉಡುಪಿ ಅವರ ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ತೆರೆಯ ಹಿಂದೆ ಕಲ್ಲಪ್ಪ ಪೂಜಾರ್, ಆಸಿಫ್, ಮಂಜುನಾಥ ಹಿರೇಮಠ, ವಿನಿತ್, ಶ್ವೇತಾ ಅವರು ಸಹಕರಿಸಿದರು. ಮಾಡಿದ್ದ ಕಳ್ಳತನದಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಗರ್ಭಿಣಿಯರಂತೆ ನಟಿಸಿದ್ದು, ಅನ್ಯಾಯ ಖಂಡಿಸುವ ಹೋರಾಟಗಾರ ಕೊನೆಗೆ ತಾನು ಕದಿಯುವ ವಿಡಂಬನಾತ್ಮಕ, ಇಬ್ಬರು ಪುರುಷರು ಜಗಳ ನಿಲ್ಲಿಸಿ, ತಮ್ಮ ಹೆಂಡತಿಯರಿಗೆ ಧೈರ್ಯ ತುಂಬಿದ ಹಾಸ್ಯದ ಪರಿ ಪ್ರೇಕ್ಷಕರನ್ನು ಅಲುಗಾಡಿಸಲಿಲ್ಲ. ಹಾಗಾಗ ಪ್ರೇಕ್ಷಕರ ಜೊತೆ ಸಂವಾದ ನಡೆಸಿದ ಕಲಾವಿದರು ಮೆಚ್ಚುಗೆಗೆ ಪಾತ್ರರಾದರು.
Leave a comment