ಹರಪನಹಳ್ಳಿ : ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್ ಶಿಪ್ ಟೂರ್ನ್ ಮೆಂಟ್ ಕರ್ನಾಟಕ ಸೀನಿಯರ್ ಥ್ರೋಬಾಲ್ ತಂಡಕ್ಕೆ ತಾಲ್ಲೂಕಿನ ಜಿ.ದಾದಾಪುರ ಗ್ರಾಮದ ಬುಳ್ಳಪ್ಪ, ಮೀನಾಕ್ಷಮ್ಮ ದಂಪತಿ ಪುತ್ರ ಎಂ.ಬಿ.ದೇವರಾಜ್ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದಿದ್ದ ಆಯ್ಕೆಪ್ರಕ್ರಿಯೆಯಲ್ಲಿ ಅಮೆಚೂರ್ ಥ್ರೋಬಾಲ್ ಅಸೊಸಿಯೇಷನ್ ಆಫ್ ಕರ್ನಾಟಕ ಸಂಸ್ಥೆ ದೇವರಾಜ್ ಅವರನ್ನು ಸೀನಿಯರ್ ತಂಡಕ್ಕೆ ಆಯ್ಕೆ ಮಾಡಿದೆ. ಮದ್ಯ ಪ್ರದೇಶದಲ್ಲಿ ಭಾನಪುರದಲ್ಲಿ 2026, ಜ.1ರಂದು ನಡೆಯಲಿರುವ ಚಾಂಪಿಯನ್ ಶಿಪ್ ನಲ್ಲಿಕರ್ನಾಟಕ ತಂಡವನ್ನು ಪ್ರತಿನಿಧಿಸುವರು. ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದಿರುವ ದೇವರಾಜ್ ಅವರಿಗೆ ಶಾಮನೂರು ಶಶಿಕುಮಾರ್ ತರಬೇತಿ ನೀಡುತ್ತಿದ್ದಾರೆ.
Leave a comment