ನಿವೃತ್ತ ಸೈನಿಕ ಎ.ರಾಜಪ್ಪ ಅವರಿಗೆ ಅದ್ದೂರಿ ಸ್ವಾಗತ

Sirisuddi Kannada
1 Min Read

ಹರಪನಹಳ್ಳಿ : ಭಾರತೀಯ ಸೇನೆಯಲ್ಲಿ ಸೈನಿಕರಾಗಿ 22 ವರ್ಷ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧ ಎ.ರಾಜಪ್ಪ ಅವರನ್ನು ಸ್ವಾಗತಿಸಿದರು.

ದ್ಯಾಪನಾಯಕನಹಳ್ಳಿ ಗೆಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.  ಜೋಷಿ ಲಿಂಗಾಪುರ ಗ್ರಾಮದ ಹನುಮಕ್ಕ ಅಜ್ಜೋಳ ದುರುಗದಯ್ಯ ದಂಪತಿ ಪುತ್ರ ಎ.ರಾಜಪ್ಪ  ಅವರು ಹಳ್ಳಿಯಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ ಪೂರ್ಣಗೊಳಿಸಿ ಸೇನೆಯಲ್ಲಿ ನೌಕರಿ ಪಡೆದು, ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಎ.ರಾಜಪ್ಪ ಮಾತನಾಡಿ, 2004ರಲ್ಲಿ ನೇಮಕಾತಿ ಹೊಂದಿ 2005 ರಿಂದ ಪಂಜಾಬ, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮುರ ಕಾಶ್ಮೀರ, ಪುಲ್ವಾಮ ದಾಳಿಯಾದಾಗ, ಅಲ್ಲಿಂದ 22 ಕಿ.ಮೀ. ದೂರದಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಆಪರೇಷನ್ ಸಿಂಧೂರದಲ್ಲಿ ಕರ್ತವ್ಯ ನಿರ್ವಹಿಸಿ, ದೇಶ ಸೇವೆ ಮಾಡಿದ ತೃಪ್ತಿ ನನಗಿದೆ. ಪುಲ್ವಾಮ್‍ ದಲ್ಲಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದೆ ಎಂದು ತಮ್ಮ ಸೇನಾ ವೃತ್ತಿಯಲ್ಲಿ ನಡೆದ ಘಟನೆಗಳನ್ನು ಸ್ಮರಿಸಿದರು. ತಾಲ್ಲೂಕು ನಿವೃತ್ತ ಸೈನಿಕ ಸಂಘದ ಉಪಾಧ್ಯಕ್ಷ ಬಾಗಳಿ ಆರ್.ಮಂಜುನಾಥ, ಎಚ್.,ಎಂ.ಜಗದೀಶ, ಎ.ಎಂ.ಪ್ರಶಾಂತ್, ಕೆ.ಮಂಜುನಾಥ, ಬೆಣ್ಣೀಹಳ್ಳಿ ಹಾಲೇಶ್, ವೃಷಬೇಂದ್ರಪ್ಪ, ಒ.ಮಂಜುನಾಥ ಇದ್ದರು.

ಹರಪನಹಳ್ಳಿ ನಗರದಲ್ಲಿ ನಿವೃತ್ತ ಸೈನಿಕ ಎ.ರಾಜಪ್ಪ ಅವರಿಗೆ ಪುಷ್ಪಮಳೆ ಸುರಿಸಿ ದ್ಯಾಪನಾಯಕನಹಳ್ಳಿ ಗ್ರಾಮಸ್ಥರು ಸ್ವಾಗತಿಸಿದರು.

Share This Article
Leave a Comment