Home ಕೃಷಿ  ಬೆಂಬಲ ಬೆಲೆ ಘೋಷಿಸಿ,ದೇಶದ ಬೆನ್ನೆಲುಬು ರಕ್ಷಿಸಿ
ಕೃಷಿ

 ಬೆಂಬಲ ಬೆಲೆ ಘೋಷಿಸಿ,ದೇಶದ ಬೆನ್ನೆಲುಬು ರಕ್ಷಿಸಿ

Share
ರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್
Share

 ಹರಪನಹಳ್ಳಿ : ರೈತರು ಬೆಳೆದ ಧಾನ್ಯಗಳಿಗೆ ಆಳುವ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಿ, ನಮ್ಮ ದೇಶದ ಬೆನ್ನೆಲುಬು ಅನ್ನದಾತನನ್ನು ರಕ್ಷಿಸಿ ಎಂದು ಪಾಂಡೊಮಟ್ಟಿ ಕಮ್ಮತ್ತಹಳ್ಳಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಡಗ್ಗಿ ಬಸಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಆಯೋಜಿಸಿದ್ದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಬಸವೇಶ್ವರ ಸ್ವಾಮಿ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ದುಡಿದ ಹಣ ಕುಡಿತದ ಚಟಕ್ಕೆ ಬಳಕೆ ಆಗುತ್ತಿದೆ. ಇದರಿಂದ ಕಲ್ಯಾಣ ಆಗಬೇಕಿದ್ದ ಕರ್ನಾಟಕ ಕುಡುಕರ ರಾಜ್ಯವಾಗಿದೆ. ವಾಲ್ಮೀಕಿ, ಗೌತಮ ಬುದ್ದ, ಬಸವಣ್ಣ, ಗಾಂಧೀಜಿ, ಅಂಬೇಡ್ಕರಂತಹ ಮಹನೀಯರು ನಡೆದಾಡಿದ ನೆಲದಲ್ಲಿ ದುಶ್ಚಟಗಳೇ ಕಾರುಬಾರು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಉದ್ಘಾಟಿಸಿದ ಮಾಜಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಕರ ಕುಶಲ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಯೋಜನಾಧಿಕಾರಿ ಬಾಬು, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗುಂಡಗತ್ತಿ ಮಂಜುನಾಥ್, ಎಸ್.ಎಂ.ಶೈಲಜಾ, ಮಮತಾ, ಎಸ್.ಪವಿತ್ರಾ ಉಮಾಪತಿ, ಸಿದ್ದಮ್ಮ, ಶಂಕ್ರಪ್ಪ, ರಮೇಶ, ಕುಬೇರಪ್ಪ, ಶಂಭುಲಿಂಗಪ್ಪ, ಬಸವರಾಜ್, ಮೇಲ್ವಿಚಾರಕ ಪ್ರಶಾಂತ್, ಯರ್ರಿಸ್ವಾಮಿ, ದುರ್ಗೇಶ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Homeಕೃಷಿ

ಜಿಲ್ಲೆಯಲ್ಲಿ ಭೀಕರ ಬರಛಾಯೆ: ಬರ ಅಧ್ಯಯನಕ್ಕೆ ಅಖಾಡಕ್ಕಿಳಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ(ಹೊಸಪೇಟೆ) : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಬರ ಹಾಗೂ ಮಳೆ ಅಭಾವದ ಛಾಯೆ ಆವರಿಸಿದೆ....

Homeಕೃಷಿ

ತುಂಗಭದ್ರ ಜಲಾಶಯದ ನೀರು ಕೇವಲ ಕುಡಿಯಲು ಮಾತ್ರ  ರೈತರು ಪರ್ಯಾಯ ಬೆಳೆ ಆಶ್ರಯಿಸಿ : ಡಿಸಿ ಮನವಿ

ವಿಜಯನಗರ (ಹೊಸಪೇಟೆ) : ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ಕ್ಷೀಣಿಸುತ್ತಿದೆ ಜನ...

ಮೀನು ಗಾರಿಕೆ ಇಲಾಖೆ
Homeಕೃಷಿ

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಉಚಿತ ಮೀನುಗಾರಿಕೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.