ಹರಪನಹಳ್ಳಿ : ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ‘ಸಹಕಾರ ಸಪ್ತಾಹ ‘ ಆಚರಣೆ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಬೈಕ್ ಜಾಥಕ್ಕೆ ಚಾಲನೆ ನೀಡಲಾಯಿತು,
ವಿಜಯನಗರ ಜಿಲ್ಲಾ ಸಹಕಾರಿ ಇಲಾಖೆ, ಜಿಲ್ಲಾ ಸಹಕಾರಿ ಯೂನಿಯನ್, ಹರಪನಹಳ್ಳಿ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು, ಟಿ.ಎ.ಪಿ.ಸಿ.ಎಂ.ಎಸ್, ಪಿಕಾರ್ಡ್ ಬ್ಯಾಂಕ್, ಹಾಗೂ ತಾಲೂಕ ಆರೋಗ್ಯ ಇಲಾಖೆ ಮತ್ತು ಮೈಲಾರ ಕಣ್ಣಿನ ಆಸ್ಪತ್ರೆ ಹೊಸಪೇಟೆ ಹಾಗು ಅಡವಿಯಲ್ಲಿ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಡವಿಹಳ್ಳಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಸಪ್ತಾಹದ ಬೈಕ್ ಜಾಥಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಿ.ಎಂ ಶಿವಪ್ರಸಾದ್ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ವೈ ಡಿ.ಅಣ್ಣಪ್ಪ ಚಾಲನೆ ನೀಡಿದರು.ಜಾಥಾ ಅಂಬೇಡ್ಕರ್ ಸರ್ಕಲ್ ನಿಂದ ( ಐ ಬಿ ಸರ್ಕಲ್) ಹಳೆ ಬಸ್ ಸ್ಟಾಂಡ್ ಮಾರ್ಗವಾಗಿ ಹರಿಹರ ಸರ್ಕಲ್ ವಾಲ್ಮೀಕಿ ನಗರ ಇಸ್ಲಾಂಪುರ ತಿಮ್ಮಲಾಪುರ ಮಾರ್ಗವಾಗಿ ಅಡವಿಹಳ್ಳಿ ವರೆಗೆ ಮುಂದುವರೆಯಿತು.
ಜಾಥ ಹಾಗೂ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಯೂನಿಯನ್ ನಿರ್ದೇಶಕ ದೊಡ್ಡಬಸಪ್ಪ, ಡಿ ಆರ್.ಜೆಎಂ ವೀರಭದ್ರಯ್ಯ, ತಾಲೂಕು ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ವೈ.ಡಿ ಅಣ್ಣಪ್ಪ, ಆರ್ ಸಿ ಎಸ್ ಕೃಷ್ಣ ನಾಯ್ಕ್, ಸಹಕಾರ ಅಭಿವೃದ್ಧಿ ಅಧಿಕಾರಿ ಜಿಎಸ್ ಸುರೇಂದ್ರ, ಹಾಲು ಒಕ್ಕೂಟದ ವಿಸ್ತರಣ ಅಧಿಕಾರಿ ಮೃತ್ಯುಂಜಯ,
ಬಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಮರಿಸ್ವಾಮಿ, ಬಿ 90 ಸೊಸೈಟಿ ಕಾರ್ಯದರ್ಶಿ ಬಸವರಾಜ್, ಟಿಎಪಿಎಂಸಿ ಕಾರ್ಯದರ್ಶಿ ತಿರುಪತಿ, ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಸಿಬ್ಬಂದಿಗಳು ಹಾಗು ಮೈಲಾರ ಆಸ್ಪತ್ರೆಯ ವೈದ್ಯರಾದ ಡಾ: ಅರವಿಂದ್ ಡಾ. ರಾಜಶೇಖರ್, ಡಾಕ್ಟರ್ ರೇಖಾ ಮುಂತಾದವರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು..
Leave a comment