Home ಶಿಕ್ಷಣ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಸರ್ಕಾರಿ ನೌಕರರ ಸಂಘದಿಂದ ವಿನೂತನ ಪ್ರಯತ್ನ
ಶಿಕ್ಷಣ

ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಸರ್ಕಾರಿ ನೌಕರರ ಸಂಘದಿಂದ ವಿನೂತನ ಪ್ರಯತ್ನ

Share
ನೌಕರರ ಭವನ ಹರಪನಹಳ್ಳಿ
Share

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಕೌಶಲ್ಯ ಬೆಳೆಸುವ ಹಾಗೂ ಓದುವ ಹವ್ಯಾಸವನ್ನು ಹೆಚ್ಚಿಸುವ ಸದುದ್ದೇಶದಿಂದ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಉಚಿತ ಬೇಸಿಗೆ ಶಿಬಿರ ಆರಂಭಿಸಿ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು.

ಶಿಬಿರದ ನೇತೃತ್ವವಹಿಸಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಹೆಚ್.ಎಂ. ಮಾತನಾಡಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ, ಅವರಲ್ಲಿ ಏಕಾಗ್ರತೆ ಹಾಗೂ ಓದುವ ಹವ್ಯಾಸವನ್ನು ಹೆಚ್ಚಿಸಲು ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಶಿಬಿರ ಆಯೋಜಿಸಲಾಗಿದೆ. ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಜ್ಞಾನಧಾರೆ ಎರೆಯಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಮಂಜುನಾಥ ಪೂಜಾರ ಮಾತನಾಡಿ, ‘ಸರ್ಕಾರಿ ಶಾಲಾ ಮಕ್ಕಳಲ್ಲಿ ಶಿಕ್ಷಣದ ಜೊತೆ ಕೌಶಲ ಹೆಚ್ಚಿಸಲು ಶಿಬಿರದಲ್ಲಿ ಕಲಿಸಲಾಗುವುದು’ ಎಂದರು.  ಶಾಲಾ ಶಿಕ್ಷಣ ಇಲಾಖೆ ಸಂಘದ ಅಧ್ಯಕ್ಷ  ಗಿರಿರಾಜ್,  ‘ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಸಂಘಟನೆಯ ಬಲವರ್ಧನೆಯಾಗುತ್ತಿದೆ. ಇಂತಹ ಉತ್ತಮ ಕೆಲಸಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲಿ’ ಎಂದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ   ಗುರುಮೂರ್ತಿ,  “ಎಲ್ಲಾ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು.” ಎಂದು ಹೇಳಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘ  ಸಂಘಟನಾ ಕಾರ್ಯದರ್ಶಿ ಮಕ್ಬುಲ್ ಭಾಷಾ,ಮಕ್ಕಳಿಗೆ ಕೇವಲ ಪಠ್ಯವಲ್ಲದೆ ನೀತಿ ಶಿಕ್ಷಣ, ಮೌಲ್ಯಗಳು, ಸಂಸ್ಕೃತಿ, ಯೋಗ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಸಂಘಟನೆಯ ಕಾರ್ಯ ನಿಜಕ್ಕೂ ಸಂತೋಷದಾಯಕ.’ ಎಂದು ತಿಳಿಸಿದರು. ಪ್ರಮುಖರಾದ ಮಲ್ಲಮ್ಮ ವಡ್ಡರ್, ಸವಿತಾ, ಶೋಭಾ ಕುಮಾರಿ, ರೇಷ್ಮಾ, ಮಂಜುಳಾ, ಹುಸೇನ್ ಬಾಷಾ, ಹಿರಿಯರಾದ ನಾಗರಾಜ್, ಒಕ್ಕೂಟದ ಕಾರ್ಯದರ್ಶಿ ಕೊಟ್ರಯ್ಯ ಇದ್ದರು. ಶಿಕ್ಷಕಿ ಕವಿತಾ ಐ.ಜಿ. ಸ್ವಾಗತಿಸಿದರು. ಜಯಲಕ್ಷ್ಮಿ  ನಿರೂಪಿಸಿದರೆ, ರೇಣುಕಾ ವಂದನೆ ಸಲ್ಲಿಸಿದರು.

 

Share

Leave a comment

Leave a Reply

Your email address will not be published. Required fields are marked *

Related Articles
nivrutta
Homeಕಲೆಕ್ರೀಡೆಶಿಕ್ಷಣ

ನೌಕರರ ಹಿತರಕ್ಷಣೆಗೆ ಸಂಘ ಸದಾ ಬದ್ಧ: ಎನ್.ಜಿ. ಮನೋಹರ ಭರವಸೆ

ಹರಪನಹಳ್ಳಿ: "ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ನೌಕರರ ಸಂಘ ಹಾಗೂ ತಾಲೂಕು ಘಟಕವು ಸದಾ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ. ಮನೋಹರ ಅವರು ಭರವಸೆ ನೀಡಿದರು. ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ನಿವೃತ್ತ ನೌಕರರು, ನಿವೃತ್ತ ಶಿಕ್ಷಕರು ಹಾಗೂ ಬಡ್ತಿ ಹೊಂದಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆಯೇ ವಿನಃ ಅವರ ಅನುಭವದಿಂದಲ್ಲ. ನಿವೃತ್ತಿಯ ನಂತರವೂ ನಾವು ಮತ್ತು ನಿವೃತ್ತ ನೌಕರರ ಸಂಘ ಸದಾ ನಿಮ್ಮ ಜೊತೆಗಿರುತ್ತೇವೆ. ನಿವೃತ್ತ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ವ್ಯಾಯಾಮ, ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ, ಕಲೆ, ಯೋಗ ಅಥವಾ ವಾಕಿಂಗ್ ಮಾಡುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು" ಎಂದು ಮನೋಹರ ಅವರು ಕಿವಿಮಾತು ಹೇಳಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಎಚ್.ಎಂ ಮಾತನಾಡಿ, "ಮಹಿಳಾ ನೌಕರರಿಗೆ ಋತುಚಕ್ರದ ರಜೆ ಘೋಷಿಸುವಂತೆ ಸರ್ಕಾರಕ್ಕೆ ನಮ್ಮ ಸಂಘಟನೆಯು ಮೊದಲೇ ಧ್ವನಿಗೂಡಿಸಿ ಒತ್ತಾಯಿಸಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ನೌಕರರ ಪರವಾಗಿ ಇಂತಹ ಸಕ್ರಿಯ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಪ್ರಸ್ತುತ ಅಧ್ಯಕ್ಷರಾದ ಮನೋಹರ್ ಅವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ತಾಲೂಕು ಸಂಘಟನೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಿದ್ದಾರೆ. ಸಂಘಟನೆಗಳು ವೃತ್ತಿಯ ಜೊತೆಗೆ ಪ್ರವೃತ್ತಿಯಾಗಬೇಕೇ ಹೊರತು, ಸಂಘಟನೆಯೇ ವೃತ್ತಿಯಾಗಬಾರದು. ನಾವೆಲ್ಲರೂ ಸೇರಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸೋಣ" ಎಂದರು. ಮಂಜುನಾಥ ಪೂಜಾರ್ ಅವರು ಮಾತನಾಡಿ, "ಶಾಲೆಗಳಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕರ ಸಮಯಪಾಲನೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳೊಂದಿಗಿನ ಮಧುರ ಬಾಂಧವ್ಯ ನಿಜಕ್ಕೂ ಶ್ಲಾಘನೀಯ. ಇವರ ನಿವೃತ್ತ ಜೀವನ ಸುಖಕರವಾಗಿರಲಿ" ಎಂದು ಹಾರೈಸಿದರು. ಬಿಇಒ ಕಚೇರಿಯ ಇಸಿಒ ವೀರೇಶ್ ಮಾತನಾಡಿ, ನಿವೃತ್ತ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕರನ್ನು ಕರೆಸಿ ಗೌರವಿಸುತ್ತಿರುವ ನೌಕರರ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಶಿಕ್ಷಕ ಬಿ. ಆಂಜನೇಯ ಅವರೂ ಸಹ ವೇದಿಕೆಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ನಿವೃತ್ತ ಶಿಕ್ಷಕ ಸಲಾಂ ಅವರು "ಪ್ರೀತಿಯ ಗಾಳಿ ಬೀಸುತ್ತಿದೆ..." ಎಂಬ ಗೀತೆಯನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.  ಸರ್ಕಾರಿ ನೌಕರರ ಸಂಘದ ರಾಜ್ಯ...

harapanahalli-muslim-employees-aid-to-students
ಶಿಕ್ಷಣಸುದ್ದಿಗಳು

ಹರಪನಹಳ್ಳಿ ಮುಸ್ಲಿಂ ನೌಕರರಿಂದ ವಿದ್ಯಾರ್ಥಿಗಳಿಗೆ ನೆರವು

ಹರಪನಹಳ್ಳಿ: ‘ದಾನಧರ್ಮ ಮಾಡುವುದು ಇಸ್ಲಾಂ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅರ್ಹರಿಗೆ...

ಶಿಕ್ಷಣ

ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

ವಿಜಯನಗರ (ಹೊಸಪೇಟೆ) :  ತಾಲೂಕಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ (ಜಿಟಿಟಿಸಿ) ಪ್ರಸಕ್ತ ಸಾಲಿನಲ್ಲಿ...

ಶಿಕ್ಷಣಸುದ್ದಿಗಳು

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ದಿಢೀರ್ ಸ್ಥಗಿತ! ಕಾರಣವೇನು?**

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ 2026-31ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.