ಹರಪನಹಳ್ಳಿ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31ನೇ ಅವಧಿಗೆ ಆಡಳಿತ ಮಂಡಳಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಚುನಾವಣೆ ಅಧಿಕಾರಿ ಕೆ.ಸಿದ್ದಲಿಂಗನಗೌಡ ಅವರು ಚುನಾವಣೆ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸ್ವೀಕರಿಸಿದ್ದಾರೆ.
ಒಟ್ಟು 22 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಶನಿವಾರ ಸಂಜೆ ವೇಳೆಗೆ ಒಟ್ಟು 23 ನಾಮಪತ್ರಗಳು ಸ್ವೀಕಾರಗೊಂಡಿವೆ. ಭಾನುವಾರ ಸಂಜೆವರೆಗೂ ನಾಮಪತ್ರ ಸಲ್ಲಿಸಲು ಕಾಲಾವಕಾಶವಿದೆ ಎಂದು ಚುನಾವಣೆ ಅಧಿಕಾರಿ ಕೆ.ಸಿದ್ದಲಿಂಗನಗೌಡ ಮಾಹಿತಿ ನೀಡಿದರು.
Leave a comment