Home ಸುದ್ದಿಗಳು ಆಡಂಬರದ ಮದುವೆಗೆ ಕಡಿವಾಣ ಹಾಕಿ: ವರಸದ್ಯೋಜಾತ ಸ್ವಾಮೀಜಿ ಕಿವಿಮಾತು
ಸುದ್ದಿಗಳು

ಆಡಂಬರದ ಮದುವೆಗೆ ಕಡಿವಾಣ ಹಾಕಿ: ವರಸದ್ಯೋಜಾತ ಸ್ವಾಮೀಜಿ ಕಿವಿಮಾತು

Share
tegginamata
Share

ಹರಪನಹಳ್ಳಿ: ‘ಇಂದಿನ ದಿನಗಳಲ್ಲಿ ಮದುವೆಗಳು ಸರಳತೆಯ ಬದಲು ಆಡಂಬರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇದು ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಇಂತಹ ಅದ್ದೂರಿತನಕ್ಕೆ ಕಡಿವಾಣ ಬೀಳಬೇಕಿದೆ’ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ವರಸದ್ಯೋಜಾತ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ತೆಗ್ಗಿನಮಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 79ನೇ ಪುಣ್ಯಾರಾಧನೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಸಾಮೂಹಿಕ ವಿವಾಹಗಳು ಸನಾತನ ಪರಂಪರೆಯ ಪುನರ್ಜೀವನವಿದ್ದಂತೆ. ಇಲ್ಲಿ ನಡೆಯುವ ಮದುವೆಗಳು ಕುಟುಂಬಗಳ ಭವಿಷ್ಯದ ಸುಂದರ ಕನಸುಗಳಿಗೆ ಮುನ್ನುಡಿಯಾಗುತ್ತವೆ’ ಎಂದು ಅವರು ಆಶೀರ್ವದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳ್ಳಾರಿ ಸಂಸದ ಇ. ತುಕಾರಾಂ ಮಾತನಾಡಿ, ‘ಸರ್ಕಾರ ಮಾಡಬೇಕಾದ ಅನೇಕ ಜನಪರ ಕಾರ್ಯಗಳನ್ನು ನಾಡಿನ ಮಠ-ಮಾನ್ಯಗಳು ಮಾಡುತ್ತಿರುವುದು ಶ್ಲಾಘನೀಯ’ ಎಂದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ‘ನವದಂಪತಿಗಳು ಪರಸ್ಪರ ಅರ್ಥಮಾಡಿಕೊಂಡು ಸುಖಿ ಜೀವನ ನಡೆಸಬೇಕು. ಅತ್ತೆ-ಮಾವಂದಿರನ್ನು ಸ್ವಂತ ತಂದೆ-ತಾಯಿಯಂತೆ ಕಂಡಾಗ ಮಾತ್ರ ಸಂಸಾರ ಸುಭದ್ರವಾಗಿರುತ್ತದೆ’ ಎಂದು ಹಾರೈಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಕಣ್ಮರೆಯಾಗುತ್ತಿರುವ ಅವಿಭಕ್ತ ಕುಟುಂಬ ಪದ್ಧತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 21 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಡಾ. ಟಿ.ಎಂ. ಜ್ಯೋತಿ ಕಿರಣ್ ಕುಮಾರ್ ಅವರಿಗೆ ‘ಪ್ರೇರಣಾದಾಯಕ ಮಹಿಳಾ ನಾಯಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಜ್ಯೋತಿಷಿ ರಾಜಣ್ಣ, ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಟಿ.ಎಂ. ವಿಶ್ವನಾಥ, ಎಚ್.ಎಂ. ಕೊಟ್ರಯ್ಯ, ಟಿ.ಎಂ. ಪ್ರತೀಕ್, ಟಿ.ಎಂ. ರಾಜಶೇಖರ, ಶಿರಬಿ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯಸುದ್ದಿಗಳು

ಅಡವಿಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಕಳಸಾರೋಹಣ

ಹರಪನಹಳ್ಳಿ: ಮೊಬೈಲ್ಗೆ ಹೇಗೆ ನೆಟ್ವರ್ಕ್ ಟವರ್ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ, ದೇವಸ್ಥಾನಗಳು...

Homeಸುದ್ದಿಗಳು

ಕೋಟೆ ಅಂಜನೇಯ ದೇವಸ್ಥಾನ ಜಾಗ ಒತ್ತುವರಿ ತೆರವುಗೊಳಿಸದಿದ್ದರೆ ಹೋರಾಟದ ಎಚ್ಚರಿಕೆ

ಹರಪನಹಳ್ಳಿ (ವಿಜಯನಗರ ಜಿಲ್ಲೆ ) : ಪಾಳೆಗಾರ ರಾಜಸೋಮಶೇಖರ ನಾಯಕರ ಕಾಲದ ನಿರ್ಮಾಣವಾದ ಕೋಟೆ ಅಂಜನೇಯ...

ssm dvg
ಸುದ್ದಿಗಳು

ಶಾಮನೂರು ಶಿವಶಂಕರಪ್ಪ ಜನ್ಮದಿನ: ಜೂನ್‌ 17ಕ್ಕೆ  ಉಚಿತ ಸಾಮೂಹಿಕ ವಿವಾಹ  

ಹರಪನಹಳ್ಳಿ : ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜೂನ್...

vijaya vikrama
Homeಸುದ್ದಿಗಳು

ದೇಶದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ದೊಡ್ಡದು : ಕೋಡಿಹಳ್ಳಿ ಭೀಮಪ್ಪ

ಹರಪನಹಳ್ಳಿ : ಪತ್ರಿಕೋದ್ಯಮದಲ್ಲಿ ನಿಷ್ಠೆ, ಧೈರ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಸಮಾಜದ ದಿಕ್ಕು ಬದಲಾಯಿಸಲು ಸಾಧ್ಯವಾಗುತ್ತದೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.