ಹರಪನಹಳ್ಳಿ ; ಒಂದೇ ದಿನ ಎಷ್ಟು ಊರುಗಳಲ್ಲಿ ರಥೋತ್ಸವ ಜರುಗಿದವು ಈ ಸುದ್ದಿ ಓದಿ

Sirisuddi Kannada
1 Min Read

ಹರಪನಹಳ್ಳಿ: ದವನದ ಹುಣ್ಣಿಮೆಯ ಪ್ರಯುಕ್ತ ತಾಲೂಕಿನಾದ್ಯಂತ ಗುರುವಾರ ಸಂಜೆ ವಿವಿಧ ದೇವಾಲಯಗಳ ರಥೋತ್ಸವಗಳು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿದವು.

ಸುದ್ದಿಯ ಪ್ರಮುಖ ಅಂಶಗಳು:

arsikere

  • ಅರಸೀಕೆರೆ ಶ್ರೀ ಕೋಲಶಾಂತೇಶ್ವರ ರಥೋತ್ಸವ: ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಕೋಲಶಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ತೀರ್ಥಹಳ್ಳಿಯ ವೀರಗಾಸೆ, ಗದಗ ಜಿಲ್ಲೆಯ ಕಣ್ಣೂರು ಮಹಿಳೆಯರ ಡೊಳ್ಳು ಕುಣಿತ ಮೆರುಗು ನೀಡಿದವು. ರಾತ್ರಿ ‘ಸಂಗ್ಯಾಬಾಳ್ಯ’ ನಾಟಕ ಪ್ರದರ್ಶನಗೊಂಡಿತು.

  • kote
  • ಕೋಟೆ ಆಂಜನೇಯ ಸ್ವಾಮಿ ನೂತನ ರಥ: ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿಯ ನೂತನ ರಥ ಲೋಕಾರ್ಪಣೆಗೊಂಡಿತು. ಸ್ವಾಮಿಯ ಧ್ವಜವನ್ನು ಭಕ್ತರಾದ ರೂಪ ಅವರು ರೂ. 1.70 ಲಕ್ಷಕ್ಕೆ ಹರಾಜಿನಲ್ಲಿ ಪಡೆದುಕೊಂಡರು.

  • gundagatti
  • ಗುಂಡಗತ್ತಿ ಆಂಜನೇಯ ರಥೋತ್ಸವ: ಗುಂಡಗತ್ತಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಸರ್ಕಾರಿ ನೌಕರರ ಬಳಗದಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

  • neelagunda
  • ಅಪರೂಪದ ಜೋಡಿ ರಥೋತ್ಸವಗಳು: ಬೆಣ್ಣಿಹಳ್ಳಿಯಲ್ಲಿ ಪೌರಾಣಿಕ ಹಿನ್ನೆಲೆಯ ಪಂಪಾಪತಿ-ಹಂಪಾಂಬ ಹಾಗೂ ನೀಲಗುಂದ ಗ್ರಾಮದಲ್ಲಿ ವೀರಭದ್ರೇಶ್ವರ-ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಜೋಡಿ ರಥೋತ್ಸವಗಳು ಆಕರ್ಷಕ ಪುಷ್ಪಾಲಂಕಾರದೊಂದಿಗೆ ಸಂಪನ್ನಗೊಂಡವು.

Share This Article
Leave a Comment