ಹರಪನಹಳ್ಳಿ: ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಗ್ರಾಮೀಣ ಭಾಗದ ನಾಟಕ ಕಲೆಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಸೀಕೆರೆ ಗ್ರಾಮದ ಕೋಲ ಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಕೋಲ ಶಾಂತೇಶ್ವರ ರಥೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
-
ರಂಗಭೂಮಿಗೆ ಪ್ರೋತ್ಸಾಹ : ರಥೋತ್ಸವದ ಅಂಗವಾಗಿ ಮಠದಿಂದ ಪ್ರತಿವರ್ಷ ನಾಟಕ, ರಸಮಂಜರಿ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
-
ಸಂಗ್ಯಾ ಬಾಳ್ಯ ಪ್ರದರ್ಶನ : ಪ್ರಸಿದ್ಧ ಜಾನಪದ ನಾಟಕ ‘ಸಂಗ್ಯಾ ಬಾಳ್ಯ’ ಪ್ರದರ್ಶನಗೊಂಡು ಜನರ ಮನ ಗೆದ್ದಿತು. ಈ ಹಿಂದೆ ದಿವಂಗತ ಎಂ.ಪಿ. ಪ್ರಕಾಶ್ ಅವರು ಈ ನಾಟಕದ ಮೂಲಕ ರಂಗಭೂಮಿಗೆ ನೀಡಿದ ಕೊಡುಗೆಯನ್ನು ಶ್ರೀಗಳು ಸ್ಮರಿಸಿದರು.
-
ಕಲಾವಿದರಿಗೆ ಗೌರವ: ಕಲ್ಯಾಣ ಕರ್ನಾಟಕ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ರಮೇಶ್ ಅಂಚಿನಮನೆ ಮಾತನಾಡಿ, ಜಿಲ್ಲೆಯ ಹಿರಿಯ ಕಲಾವಿದರನ್ನು ಗುರುತಿಸಿ ಹಂಪಿ ವಿವಿಯಲ್ಲಿ ಹಾಗೂ ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸನ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷ ಡಾ.ಉಮಾಶಂಕರ್, ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಕೆ.ಬಿ.ಷಣ್ಮುಖಪ್ಪ ಭಾಗವತರು, ಎಚ್.ಪರಶುರಾಮಪ್ಪ, ಕೆರೆಗುಡಿಹಳ್ಳಿ ಹಾಲೇಶ್, ನೂರುಲ್ಲಾ ಸಾಹೇಬ್, ಕೆಂಚಪ್ಪ, ನಾಗಮ್ಮ ಮಾಲವಿ, ಚಂದ್ರಪ್ಪ, ಮಂಜಪ್ಪ, ಎ.ಬಿ.ಚಿದಾನಂದಗೌಡ, ಡಿ.ರಂಗಪ್ಪ, ಹೆಗ್ಗಪ್ಪ, ಹನುಮಂತಪ್ಪ ಇತರರಿದ್ದರು.
