Home ಅಪರಾಧ  ಪುಣಬಗಟ್ಟಿ ಆಸ್ಪತ್ರೆಯಲ್ಲಿ ಕಳ್ಳತನ : ಆರೋಪಿ ಬಂಧನ
ಅಪರಾಧ

 ಪುಣಬಗಟ್ಟಿ ಆಸ್ಪತ್ರೆಯಲ್ಲಿ ಕಳ್ಳತನ : ಆರೋಪಿ ಬಂಧನ

Share
ಹರಪನಹಳ್ಳಿ ಅರಸೀಕೆರೆ ಪೊಲೀಸ್‌ ಠಾಣೆ
Share

  ಹರಪನಹಳ್ಳಿ : ತಾಲ್ಲೂಕಿನ ಪುಣಭಗಟ್ಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು  ಪ್ರಕರಣ ದಾಖಲಾದ 24 ಗಂಟೆಯಲ್ಲಿ  ಬಂಧಿಸಿದ್ದಾರೆ.

ದಾವಣಗೆರೆ ಕಾಟಿಹಳ್ಳಿ ಗ್ರಾಮದ ಅಭಿ ಬಂಧಿತ. ಆರೋಪಿಯಿಂದ 2 ಸಿಸಿ ಕ್ಯಾಮೆರಾ, 2 ಸಿಲ್ಲಿಂಗ್ ಫ್ಯಾನ್, 20 ಟ್ಯೂಬ್ ಲೈಟ್‍ ಹಾಗೂ ಕಳ್ಳತನಕ್ಕೆ ಬಳಿಸಿ ಸಾಮಾಗ್ರಿ, ಬೈಕ್ ಜಫ್ತಿ ಮಾಡಲಾಗಿದೆ. ನ.25ರಂದು ರಾತ್ರಿ ಸಮಯದಲ್ಲಿ ಪುಣಬಗಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಆಸ್ಪತ್ರೆ ವೈದ್ಯ ಡಾ.ಗಿರಿಯಪಳ್ಳ ಬಸವರಾಜ್ ಡಿ.9 ರಂದು ಠಾಣೆಗೆ ದೂರು ಸಲ್ಲಿಸಿದ್ದರು.

ಡಿವೈಎಸ್ಪಿ ಗಳಾದ ಮಲ್ಲೇಶ ಡೊಡ್ಮನಿ, ಸಂತೋಷ ಚವ್ಹಾಣ, ಸಿಪಿಐ ಮಹಾಂತೇಶ ಜಿ.ಸಜ್ಜನ್, ಪಿಎಸ್ಐ ವಿಜಯಕೃಷ್ಣ ಅವರ ನೇತೃತ್ವದಲ್ಲಿ ಎಲ್‍.ಪೀಕ್ಯನಾಯ್ಕ, ಹರೀಶ್ ದೇವರಹಟ್ಟಿ, ಗುರುರಾಜ್, ಗುರ್ಯಾನಾಯ್ಕ, ಚಂದ್ರಶೇಖರ, ಮತ್ತಿಹಳ್ಳಿ ಕೊಟ್ರೇಶ್ ಅವರು ಪತ್ತೆ ಕಾರ್ಯಾಚರಣೆ ತಂಡದಲ್ಲಿದ್ದರು. ಅವರ ಕೆಲಸವನ್ನು 24 ಗಂಟೆಯಲ್ಲಿ ಆರೋಪಿ ಪತ್ತೆ ಹಚ್ಚಿದ ತಂಡವನ್ನು ಎಸ್ಪಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಅಪರಾಧ

ಪೊಲೀಸ್ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ : 4.57ಕೋಟಿ ಸ್ವತ್ತು ವಶ

ವಿಜಯನಗರ(ಹೊಸಪೇಟೆ) : 2025ರ ಜನವರಿ 1 ರಿಂದ ಜೂನ್ 30 ರವರೆಗೆ ಜಿಲ್ಲೆಯ್ಲಲಿ ಸ್ವತ್ತು ಕಳುವಾದ...

ಬಾಗಳಿಯಲ್ಲಿ ಬಾವಿಗೆ ಬಿದ್ದು ಬಾಲಕ ಸಾವು
Homeಅಪರಾಧ

ಬಾವಿಗೆ ಬಿದ್ದು ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನ ವೀಕ್ಷಣೆಗೆ ಬಂದಿದ್ದ 4ನೇ ತರಗತಿಯ...

sandeep kanivihalli
Homeಅಪರಾಧ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹರಪನಹಳ್ಳಿ : ತಾಲೂಕಿನ ಕಣಿವಿಹಳ್ಳಿಯಲ್ಲಿ ನೀರು ತರಲು ಹೋಗಿದ್ದ ಬಾಲಕ ಸಂದೀಪ್ (15) ಕೊಳವೆಬಾವಿ ಬಳಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.