ಹರಪನಹಳ್ಳಿ : ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪಡೆದಿದ್ದ ಸಹಪಾಠಿಗಳ 26 ವರ್ಷದ ಬಳಿಕ ಒಂದೆಡೆ ಸೇರಿ ಬಾಲ್ಯದ ನೆನಪು ಮೆಲುಕು ಹಾಕಿದರು.
ಹಲುವಾಗಲು ಗ್ರಾಮದಲ್ಲಿ ಶಾಲೆ ಕಲಿತು, ಈಗ ವೈದ್ಯಕೀಯ, ಫಾರ್ಮಸಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ, ಕಂದಾಯ ಇಲಾಖೆಗಳಲ್ಲಿ ನೌಕರಿ ಮಾಡುತ್ತಿರುವ ಗೆಳೆಯರು ಸೋಮವಾರ ಸೇರಿ ವಿಚಾರ ವಿನಿಮಯ ಮಾಡಿಕೊಂಡರು. ಗುರುತು ಸಿಗದೇ ಪರದಾಡಿದ ಕೆಲ ಗೆಳೆಯರು, ಪರಸ್ಪರ ಪರಿಚಯಿಸಿಕೊಂಡರು. ಆಲಿಂಗಿಸಿ ಬಾಲ್ಯದ ತುಂಟಾಟಗಳನ್ನು ಸ್ಮರಿಸಿದರು. ತಮಗೆ ಅಕ್ಷರ ಕಲಿಸಿದ ಶಿಕ್ಷಕ ವರ್ಗದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದು, ವಿಶೇಷವಾಗಿತ್ತು. ಒಟ್ಟಿಗೆ ಬೋಜನ ಸವಿದು ತಮ್ಮ ಗ್ರಾಮಗಳಿಗೆ ತೆರಳಿದರು.
ಡಾ,ಗಿರೀಶ್, ನಾಗರಾಜ್, ಬಡಿಗೇರ ಬಸವರಾಜ್, ವನಜಾಕ್ಷಮ್ಮ, ಡಾ.ಶಿಲ್ಪಾ, ಬಸವರಾಜ್, ದಯಾನಂದ, ಚನ್ನಬಸಪ್ಪ, ಕವಿತಾ, ಗಿರಿಜಾ, ಅಶೋಕ, ಪುಟ್ಟಪ್ಪ ದುಗ್ಗಾವತಿ, ನಾಗರಾಜ ತಿಮ್ಲಾಪುರ, ಅಂಜಿನಪ್ಪ ಚಿರಸ್ತಹಳ್ಳಿ ಇತರರಿದ್ದರು.
Leave a comment