ವಿಜಯನಗರ : ಮಕ್ಕಳಿಗೆ ಶೈಕ್ಷಣಿ ಅರಿವು ಕಾರ್ಯಕ್ರಮದ ಮೂಲಕ ಶಾಲೆ-ಮನೆ-ಸಮಾಜ-ಸರ್ಕಾರ ಎಂಬ ನಾಲ್ಕು ಪ್ರಮುಖ ಅಂಗಗಳನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಸತ್ಪ್ರಯತ್ನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿನೋಬಾ ಭಾವೆ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಎಎಂಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ ರಿಜಿಸ್ಟರ್ ಹೊಳಗುಂದಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ, ಶಾಲಾ ಮಕ್ಕಳಿಗೆ ಶೈಕ್ಷಣಿ ಅರಿವು ಕಾರ್ಯಕ್ರಮವನ್ನು ಉದ್ದೆಶಿಸಿ ಅವರು ಮಾತನಡಿದರು.
ಅರಿವು ಕಾರ್ಯಕ್ರಮದ ಮೂಲಕ ಆರೋಗ್ಯ, ಸ್ವಚ್ಛತೆ, ಬಾಲ್ಯ ವಿವಾಹ ತಡೆ, ಡಿಜಿಟಲ್ ಸುರಕ್ಷತೆ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ನಮ್ಮ ಗುರಿ ಎಂದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಮುದಾಯ ಹಾಗೂ ವಿವಿಧ ಇಲಾಖೆಗಳ ಒಗ್ಗಟ್ಟಿನ ಶ್ರಮ ಅತ್ಯಗತ್ಯ ಎಂದು ಹೇಳಿದರು.
ಆರ್‌ಟಿಐ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ವಾಗೀಶ್ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದೆ. ಸಮಗ್ರ ಸಮಾಜದ ವಿಕಾಸ ಹಾಗೂ ದೇಶದ ಆರ್ಥಿಕ ಪ್ರಗತಿಗೆ ಗುಣಮಟ್ಟದ ಶಿಕ್ಷಣವೇ ಮೂಲಸ್ತಂಭವಾಗಿದೆ ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ವ್ಯಕ್ತಿಯಲ್ಲಿ ಶಿಸ್ತು, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಕಾರ್ಯವನ್ನು ಶಿಕ್ಷಣ ಮಾಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಆರ್‌ಟಿಐ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ವಾಗೀಶ್ ಅವರು ವಿನೋಬಾ ಭಾವೆ ಶಾಲಾ ಅಭಿವೃದ್ಧಿಗೆ ವೈಯಕ್ತಿಕವಾಗಿ ರೂ.1 ಲಕ್ಷ ಸಹಯಧಾನ ನೀಡಿದರು. ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಗಂಗಪ್ಪ, ತಾಲೂಕು ವೈದ್ಯಾಧಿಕಾರಿ ವಿನೋದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಂಜುನಾಥ, ಹಿರಿಯ ಶಿಕ್ಷಕರಾದ ಬಸವರಾಜ್, ಸಿಆರ್‌ಪಿಗಳಾದ ಮಹಮ್ಮದ್ ಇಮ್ರಾನ್, ಮಾಬು ಭಾಷಾ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಬಾಬು ಮಾತನಾಡಿ, ದೈಹಿಕ ಶಿಕ್ಷಕ ಜಾಕೀರ ಹುಸೇನ್ ಹಾಗೂ ಎಸ್.ಡಿ.ಎಮ್.ಸಿ. ಪದಾಧಿಕಾರಿಗಳು ಉಪಸ್ಥಿತರಿದ್ದರು.
- AMP Ajjayya Trust
- BEO Umapathi
- Child Rights
- Digital Safety
- Education Awareness
- Educational Awareness
- Karnataka Education
- School Infrastructure
- Stop Child Marriage
- VIJAYANAGARA
- Vinoba Bhave School
- ಎಎಂಪಿ ಅಜ್ಜಯ್ಯ ಟ್ರಸ್ಟ್
- ಡಿಜಿಟಲ್ ಸುರಕ್ಷತೆ
- ಬಾಲ್ಯ ವಿವಾಹ ತಡೆ
- ಬಿ ಉಮಾಪತಿ
- ಮಕ್ಕಳ ಶಿಕ್ಷಣ
- ವಿಜಯನಗರ
- ವಿನೋಬಾ ಭಾವೆ ಶಾಲೆ
- ಶಾಲಾ ಅಭಿವೃದ್ಧಿ
- ಶಿಕ್ಷಣ ಇಲಾಖೆ
- ಶೈಕ್ಷಣಿಕ ಅರಿವು
Leave a comment