Home ಕ್ರೀಡೆ  ಸೋಲು-ಗೆಲುವು ಸಮಾನಗಿ ಸ್ವೀಕರಿಸಿ : ಪ್ರಶಾಂತ ಪಾಟೀಲ್
ಕ್ರೀಡೆ

 ಸೋಲು-ಗೆಲುವು ಸಮಾನಗಿ ಸ್ವೀಕರಿಸಿ : ಪ್ರಶಾಂತ ಪಾಟೀಲ್

Share
 ಸೋಲು-ಗೆಲುವು ಸಮಾನಗಿ ಸ್ವೀಕರಿಸಿ : ಪ್ರಶಾಂತ ಪಾಟೀಲ್
Share

ಹರಪನಹಳ್ಳಿ : ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ, ಸೋಲು  ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದು ಪಾಟೀಲ್ ಆಗ್ರೊ ಏಜೆನ್ಸಿ ಮಾಲೀಕ ಹಾಗೂ ಬಿಜೆಪಿ ಮುಖಂಡ ಪ್ರಶಾಂತ್ ಪಾಟೀಲ ಹೇಳಿದರು.

ತಾಲ್ಲೂಕಿನಲ್ಲಿ ದಂಡಿನ ದುರುಗಮ್ಮ ಜಾತ್ರೆ ಪ್ರಯುಕ್ತ ಮಹರ್ಷಿ ವಾರಿಯರ್ಸ್ ಆಯೋಜಿಸಿದ್ದ ಕೋಲ ಶಾಂತೇಶ್ವರ ಯುವ ಜನೋತ್ಸವ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಸಿಯ ಮತ್ತು ಸಾಹಸ ಕ್ರೀಡೆ ಕಬ್ಬಡ್ಡಿ. ಈ ಆಟದಿಂದ ದ್ವೇಷ ಬೆಳೆಸಿಕೊಳ್ಳಬೇಡಿ. ಸೋತರು, ಗೆದ್ದರೂ ಸಂಭ್ರಮಿಸಿ. ಗ್ರಾಮೀಣ ಕ್ರೀಡೆಗಳು ಉಳಿಸಿ, ಮುಂದಿನ ಪೀಳಿಗೆಗೂ ಕಲಿಸುವ ಅಗತ್ಯವಿದೆ ಎಂದರು.

ಕ್ರೀಡೆ ಎನ್ನುವುದು ಉತ್ತಮ ಆರೋಗ್ಯಕ್ಕೆ ಅಡಿಪಾಯ, ಇತ್ತೀಚಿಗೆ ಇಂತಹ ಕ್ರೀಡೆಗಳು ಕಣ್ಮರೆಯಾಗುತ್ತಿವೆ, ಇತ್ತೀಚಿಗೆ ಯುವಕರು ಕ್ರಿಕೆಟ್ ಗೆ ಐಪಿಎಲ್ ಬೆಟ್ಟಿಂಗ್ ಗೆ ಮಾರು ಹೋಗುತ್ತಿದ್ದಾರೆ, ಗ್ರಾಮೀಣ ಭಾಗದ ಕ್ರೀಡೆಯಾದ ಕಬ್ಬಡಿಯನ್ನು ಉತ್ತೇಜಿಸಬೇಕು, ಇತ್ತೀಚೆಗೆ ಮಹಿಳಾ ಕಬಡ್ಡಿ ಆಟಗಾರ್ತಿಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಕಪ್ ನ್ನು ಗೆದ್ದಿದ್ದಾರೆ ಎಂದು ಸ್ಮರಿಸಿದರು. ವಿಎಸ್ಎಸ್ಎನ್ ಅಧ್ಯಕ್ಷ ಇಟ್ಟಿಗಿಹಳ್ಳಿ ಬಸವರಾಜ್, ಅಂತಾರಾಷ್ಟ್ರೀಯ ಕ್ರೀಡಾಪಟು ಸೊಕ್ಕೆ ಹಾಲೇಶ್, ಆಯೋಜಕರಾದ ಬಿ.ಬಸವರಾಜ್,ಕೆ. ಹೇಮಂತ್, ಹಾದಿಮನಿ ಪ್ರದೀಪ್, ಸಂದೀಪ್, ಕೆ. ಮಂಜುನಾಥ್, ವೈ.ಎ. ಪ್ರೀತಮ್, ತರಬೇತುದಾರರು, ಕ್ರೀಡಾ ಪಟುಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಕ್ರೀಡೆ

ಹರಪನಹಳ್ಳಿ : ಸಮತ ರೆಸಾರ್ಟ್‍ನಲ್ಲಿ ವಿಚಾರಗೋಷ್ಠಿ

ಹರಪನಹಳ್ಳಿ : ರಾಜಕೀಯ ಪ್ರಜಾಪ್ರಭುತ್ವ ದುರ್ಬಳಕೆ ಆಗುತ್ತಿದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಜಾತಿ ಮೇಲೆ...

Homeಕ್ರೀಡೆ

ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ

ಹರಪನಹಳ್ಳಿ : ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣನವರು ತಮ್ಮ...

renukadevi
Homeಕ್ರೀಡೆ

ಪರಿಸರ ಜಾಗೃತಿಗಾಗಿ ದಾವಣಗೆರೆಯಲ್ಲಿ ಸೈಕಲ್ ಜಾಥಾ

ದಾವಣಗೆರೆ  : ಯುವಜನರು ಮತ್ತು ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ...

kannada
Homeಕ್ರೀಡೆ

ಹರಪನಹಳ್ಳಿಯಲ್ಲಿ ಗಮನ ಸೆಳೆದ ಬೀಳ್ಕೊಡುಗೆ

ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.