ಹರಪನಹಳ್ಳಿ : ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ, ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದು ಪಾಟೀಲ್ ಆಗ್ರೊ ಏಜೆನ್ಸಿ ಮಾಲೀಕ ಹಾಗೂ ಬಿಜೆಪಿ ಮುಖಂಡ ಪ್ರಶಾಂತ್ ಪಾಟೀಲ ಹೇಳಿದರು.
ತಾಲ್ಲೂಕಿನಲ್ಲಿ ದಂಡಿನ ದುರುಗಮ್ಮ ಜಾತ್ರೆ ಪ್ರಯುಕ್ತ ಮಹರ್ಷಿ ವಾರಿಯರ್ಸ್ ಆಯೋಜಿಸಿದ್ದ ಕೋಲ ಶಾಂತೇಶ್ವರ ಯುವ ಜನೋತ್ಸವ ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಸಿಯ ಮತ್ತು ಸಾಹಸ ಕ್ರೀಡೆ ಕಬ್ಬಡ್ಡಿ. ಈ ಆಟದಿಂದ ದ್ವೇಷ ಬೆಳೆಸಿಕೊಳ್ಳಬೇಡಿ. ಸೋತರು, ಗೆದ್ದರೂ ಸಂಭ್ರಮಿಸಿ. ಗ್ರಾಮೀಣ ಕ್ರೀಡೆಗಳು ಉಳಿಸಿ, ಮುಂದಿನ ಪೀಳಿಗೆಗೂ ಕಲಿಸುವ ಅಗತ್ಯವಿದೆ ಎಂದರು.
ಕ್ರೀಡೆ ಎನ್ನುವುದು ಉತ್ತಮ ಆರೋಗ್ಯಕ್ಕೆ ಅಡಿಪಾಯ, ಇತ್ತೀಚಿಗೆ ಇಂತಹ ಕ್ರೀಡೆಗಳು ಕಣ್ಮರೆಯಾಗುತ್ತಿವೆ, ಇತ್ತೀಚಿಗೆ ಯುವಕರು ಕ್ರಿಕೆಟ್ ಗೆ ಐಪಿಎಲ್ ಬೆಟ್ಟಿಂಗ್ ಗೆ ಮಾರು ಹೋಗುತ್ತಿದ್ದಾರೆ, ಗ್ರಾಮೀಣ ಭಾಗದ ಕ್ರೀಡೆಯಾದ ಕಬ್ಬಡಿಯನ್ನು ಉತ್ತೇಜಿಸಬೇಕು, ಇತ್ತೀಚೆಗೆ ಮಹಿಳಾ ಕಬಡ್ಡಿ ಆಟಗಾರ್ತಿಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಕಪ್ ನ್ನು ಗೆದ್ದಿದ್ದಾರೆ ಎಂದು ಸ್ಮರಿಸಿದರು. ವಿಎಸ್ಎಸ್ಎನ್ ಅಧ್ಯಕ್ಷ ಇಟ್ಟಿಗಿಹಳ್ಳಿ ಬಸವರಾಜ್, ಅಂತಾರಾಷ್ಟ್ರೀಯ ಕ್ರೀಡಾಪಟು ಸೊಕ್ಕೆ ಹಾಲೇಶ್, ಆಯೋಜಕರಾದ ಬಿ.ಬಸವರಾಜ್,ಕೆ. ಹೇಮಂತ್, ಹಾದಿಮನಿ ಪ್ರದೀಪ್, ಸಂದೀಪ್, ಕೆ. ಮಂಜುನಾಥ್, ವೈ.ಎ. ಪ್ರೀತಮ್, ತರಬೇತುದಾರರು, ಕ್ರೀಡಾ ಪಟುಗಳಿದ್ದರು.
Leave a comment