Home ಬಾಗಳಿ : ಪಂಪಸೆಟ್, ವಿದ್ಯುತ್ ಕೇಬಲ್ ಕಳ್ಳತನ
Homeಅಪರಾಧ

ಬಾಗಳಿ : ಪಂಪಸೆಟ್, ವಿದ್ಯುತ್ ಕೇಬಲ್ ಕಳ್ಳತನ

Share
Share

ಬಾಗಳಿ : ಪಂಪಸೆಟ್, ವಿದ್ಯುತ್ ಕೇಬಲ್ ಕಳ್ಳತ

ಹರಪನಹಳ್ಳಿ : ತಾಲ್ಲೂಕಿನ ಬಾಗಳಿ ಗ್ರಾಮದ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಮಂಗಳವಾರ ರಾತ್ರಿ ಪಂಪ್ ಸೆಟ್‌, ವಿದ್ಯುತ್ ಕೇಬಲ್ ಗಳು ಸರಣಿ ಕಳ್ಳತನವಾಗಿವೆ.

ತಾಲ್ಲೂಕಿನ ಬಾಗಳಿ-ಕೋಡಿಹಳ್ಳಿ-ಚಿಕ್ಕಹಳ್ಳಿ ಮಾರ್ಗ ಮತ್ತು ಸುತ್ತಲಿನ ಪ್ರದೇಶದ ಬಡಮ್ಮನವರ ಸಣ್ಣ ಹನುಮಂತಪ್ಪ, ಆಳನ್ನವರ ಶೇಖರಪ್ಪ, ಮಣೇಗಾರ ಕರಿಬಸಪ್ಪ, ಎಚ್ .ಎಂ ಮಂಜುನಾಥಯ್ಯ ಸ್ವಾಮಿ, ಹಾಗೂ ಚೌಡಪ್ಪನವರ ಅಜ್ಜಯ್ಯ ಅವರುಗಳ ಜಮೀನುಗಳಲ್ಲಿ ಕೊಳವೆಬಾವಿ (ಬೋರ್ ವೆಲ್) ಹಾಗೂ ವಿದ್ಯುತ್‌ ಕೇಬಲ್ ಕತ್ತರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.‌

ಕಳ್ಳರನ್ನು ಪತ್ತೆ ಹಚ್ಚಿ, ಸಾಮಾಗ್ರಿ ಕಳೆದುಕೊಂಡಿರುವ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ರೈತ ಬಿ.ಬಿ.ರವೀಂದ್ರ ಒತ್ತಾಯಿಸಿದ್ದಾರೆ‌.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.