Home ರಾಜಕೀಯ ರಾಜ್ಯದಲ್ಲೂ ಕಾಂಗ್ರೆಸ್ ವಿರೋಧಿ ಅಲೆಯಿದೆ : ಮುತ್ತಿಗಿ ವಾಗೀಶ್
ರಾಜಕೀಯ

ರಾಜ್ಯದಲ್ಲೂ ಕಾಂಗ್ರೆಸ್ ವಿರೋಧಿ ಅಲೆಯಿದೆ : ಮುತ್ತಿಗಿ ವಾಗೀಶ್

Share
BJP LEADERS, HARPANAHALLI
Share

 ಹರಪನಹಳ್ಳಿ :   ಬಿಹಾರದಲ್ಲಿ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಮೈತ್ರಿಕೂಟ ವಿರೋಧ ಪಕ್ಷದಲ್ಲೂ ಕೂಡ ಸ್ಥಾನ ಅರ್ಹತೆ ಪಡೆದಿಲ್ಲ ಎಂದು ಬಿಜೆಪಿ ಮುಖಂಡ ಮುತ್ತಿಗಿ ವಾಗೀಶ್ ತಿಳಿಸಿದರು.

ನಗರದಲ್ಲಿ ಸಂಭ್ರಮಾಚರಣೆ ಬಳಿಕ ಅವರು, ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಇದರಿಂದ ಜನರ ಕಾಂಗ್ರೆಸ್ ವಿರುದ್ಧ ಜಾಗೃತಿ ಆಗಿರುವುದು ತೋರಿಸುತ್ತದೆ.  ಕೇಂದ್ರದ ಮೋದಿ ಮತ್ತು ಅಮಿತ್ ಶಾ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತವನ್ನು ಬಿಹಾರದ ಜನತೆ ಮೆಚ್ಚಿಕೊಂಡಿದ್ದಾರೆ ಎಂದರು.

ಕರ್ನಾಟಕದಲ್ಲೂ ಕೂಡ ಇದೀಗ ಚುನಾವಣೆ ಘೋಷಣೆಯಾದರೆ ಬಿಜೆಪಿ ಭಾರಿ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಡಾ.ರಮೇಶ ಕುಮಾರ, ಚನ್ನನಗೌಡ, ಪ್ರಾಣೇಶ, ಗೌಳಿ ಯಲ್ಲಪ್ಪ, ಆಂಜನೇಯ, ರಮೇಶ್ ಇತರರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
DKS BANGLORE
Homeರಾಜಕೀಯ

ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ, ಉಳಿದವರಿಗೆ ಯಾವ ಖಾತೆ ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ...

Homeರಾಜಕೀಯ

ಬಿಜೆಪಿ ಹಿರಿಯ ನಾಯಕರ ದಂಡು: ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಶ್ರೀರಾಮುಲು, ಕರುಣಾಕರ ರೆಡ್ಡಿ ಭಾಗಿ :

ವಿಜಯನಗರ :  ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ...

Homeರಾಜಕೀಯ

ಪೌರ ಕಾರ್ಮಿಕ ಡಿ.ಲಿಂಗಪ್ಪ ನಿವೃತ್ತಿ

ಹರಪನಹಳ್ಳಿ :  ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಡಿ.ಲಿಂಗಪ್ಪ ಅವರನ್ನು...

Homeರಾಜಕೀಯ

ಹಲುವಾಗಲು ಗ್ರಾಮಸ್ಥರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ :

ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.