Home ರಾಜಕೀಯ ಡಿಸಿಎಂ ಡಿಕೆ ಶಿವಕುಮಾರ ಲವಲವಿಕೆ
ರಾಜಕೀಯ

ಡಿಸಿಎಂ ಡಿಕೆ ಶಿವಕುಮಾರ ಲವಲವಿಕೆ

Share
Share

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಅಧಿಕಾರ ಹಂಚಿಕೆ‌‌ ಗೊಂದಲ‌ ಹಿನ್ನಲೆ‌ ಕಾಂಗ್ರೆಸ್ ಹೈಕಮಾಂಡ್‌‌ ಸೂಚನೆ‌ ಮೇರೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೊತೆಯಾಗಿ ಉಪಾಹಾರ ಸೇವಿಸಿದ್ದಾರೆ.

ಕಾವೇರಿ ನಿವಾಸಕ್ಕೆ ಆಗಮಿಸಿದ್ದ‌‌ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಬ್ರೆಕ್ ಫಾಸ್ಟ್ ಮಾಡಿದ ಸಿಎಂ‌‌ ಸಿದ್ದರಾಮಯ್ಯ 50 ನಿಮಿಷ‌ ಮಾತುಕತೆ ನಡೆಸಿದ್ದಾರೆ‌. ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಟಿ ನಡೆಸಿದರು.

ಕಾವೇರಿ ನಿವಾಸಕ್ಕೆ ಆಗಮಿಸಿದ್ದ‌‌ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಬ್ರೆಕ್ ಫಾಸ್ಟ್ ಮಾಡಿದ ಸಿಎಂ‌‌ ಸಿದ್ದರಾಮಯ್ಯ 50 ನಿಮಿಷ‌ ಮಾತುಕತೆ ನಡೆಸಿದ್ದಾರೆ‌. ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಟಿ ನಡೆಸಿದರು.

ಸಿಎಂ‌ ಸಿದ್ದರಾಮಯ್ಯ ಮಾತನಾಡಿ, ‘ನನ್ನ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ .‌ ಪಕ್ಷದ ಹೈಕಮಾಂಡ್ ಹೇಳಿದಂತೆ ನಾವು‌ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗಿದೆ. ನಮಗೆ 2028ರ ವಿಧಾನಸಭಾ ಚುನಾವಣೆ ಭಾರೀ ಮುಖ್ಯ. ನನ್ನ ಹಾಗೂ ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ “ಪಕ್ಷದ ವರಿಷ್ಠರು ಏನು ಹೇಳುತ್ತಾರೆ ಅದರಂತೆ ನಡೆದುಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ.ಯಾವುದೇ ಗುಂಪುಗಾರಿಕೆ ಮಾಡುವ ಅವಶ್ಯಕತೆಯೂ ಇಲ್ಲ. ನಮ್ಮದು ಒಂದೇ ಒಂದು ಗುಂಪು ಅದು ಕಾಂಗ್ರೆಸ್‌ ಗುಂಪು. ನಾವು ಒಟ್ಟಿಗೆ ಹೋಗುತ್ತೇವೆ” ಎಂದು‌ ಸ್ಪಷ್ಟನೆ ನೀಡಿದರು.

ʼಕಾಂಗ್ರೆಸ್‌ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ರಾಜ್ಯದಲ್ಲಿ ನಡೆದುಕೊಂಡಿದೆ. ಮುಂದೆಯೂ ನಡೆದುಕೊಳ್ಳುತ್ತದೆ. 2028ಕ್ಕೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಆ ನಿಟ್ಟಿನಲ್ಲಿ ಇಬ್ಬರು ಕೆಲಸ‌ ಮಾಡುತ್ತೇವೆ’ ಎಂದು ಹೇಳಿದರು.

ಡಿಸಿಎಂ ಲವಲವಿಕೆ

ಉಪಾಹಾರ ಸೇವನೆ ಬಳಿಕ‌ ಸಿಎಂ ಜೊತೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ ಲವಲವಿಕೆಯಿಂದ ಕಂಡುಬಂದರು, ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಶುಭಸೂಚನೆ ಸಿಕ್ಕಿದೆ ಎಂದು ಬೆಂಬಲಿಗರ ಅಂಬೋಣ.

Share

Leave a comment

Leave a Reply

Your email address will not be published. Required fields are marked *

Related Articles
Homeರಾಜಕೀಯ

ಬಿಜೆಪಿ ಹಿರಿಯ ನಾಯಕರ ದಂಡು: ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಶ್ರೀರಾಮುಲು, ಕರುಣಾಕರ ರೆಡ್ಡಿ ಭಾಗಿ :

ವಿಜಯನಗರ :  ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ...

Homeರಾಜಕೀಯ

ಪೌರ ಕಾರ್ಮಿಕ ಡಿ.ಲಿಂಗಪ್ಪ ನಿವೃತ್ತಿ

ಹರಪನಹಳ್ಳಿ :  ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಡಿ.ಲಿಂಗಪ್ಪ ಅವರನ್ನು...

Homeರಾಜಕೀಯ

ಹಲುವಾಗಲು ಗ್ರಾಮಸ್ಥರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ :

ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ...

Homeರಾಜಕೀಯ

ಹರಪನಹಳ್ಳಿ ಬೆಸ್ಕಾಂ ನೌಕರರ ಪ್ರತಿಭಟನೆ.

ಹರಪನಹಳ್ಳಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಇಲಾಖೆಯ ಎಲ್ಲಾ ನೌಕರರು ಹಾಗೂ ಸಿಬ್ಬಂದಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.