ಹರಪನಹಳ್ಳಿ : ಇಲ್ಲಿಯ ನಗರಸಭೆಗೆ ಆಡಳಿತಾಧಿಕಾರಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರನ್ನು ನೇಮಿಸಿ ನಗರಾಭಿವೃದ್ದಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಅವರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ನ.19ರಂದು ಹರಪನಹಳ್ಳಿ ಪುರಸಭೆಯ ಆಡಳಿತಾಧಿಕಾರಿಯಾಗಿ ಕಂದಾಯ ಇಲಾಖೆ ಉಪವಿಬಾಗಾಧಿಕಾರಿಯನ್ನು ನೇಮಿಸಿದ್ದರು. ಈಗ ಪುರಸಭೆ ಮೇಲ್ದರ್ಜೆ ಪಡೆದು ನಗರಸಭೆ ಆಗಿರುವ ಕಾರಣ, ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯನ್ನು ನೇಮಿಸಿ ಡಿ.24ರಂದು ಟಿ.ಮಂಜುನಾಥ ಅವರು ಆದೇಶಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಇಲ್ಲಿಯ ನಗರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಗರಸಭೆಯ ವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ.
