ಹರಪನಹಳ್ಳಿ : ತಾಲ್ಲೂಕಿನ ರಾಮಘಟ್ಟ ದೊಡ್ಡತಾಂಡದ ಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಚೌಡಮ್ಮ ದೇವಿ ಮೂರು ದಿನದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸೋಮವಾರ ಪದ್ಧತಿಯಂತೆ ಶ್ರೀ ಕಲ್ಲೇಶ್ವರ ಸ್ವಾಮಿಯ ಮೂರ್ತಿಯನ್ನು ವಿವಿಧ ವಾದ್ಯಗಳ ಮೂಲಕ ಹರಿಹರದ ತುಂಗಾಭದ್ರ ಹೊಳೆಗೆ ಪೂಜೆಗೆ ಹೊಯ್ಯಲಾಯಿತು. ಹೊಳೆ ಪೂಜೆಯ ನಂತರ ಸಾಯಂಕಾಲ ಗಂಟೆಗೆ ಗ್ರಾಮದ ಪ್ರಮುಖ ರಾಜ ಬೀದಿಯ ಮೂಲಕ ಮೆರವಣಿಗೆ ಜರುಗಿತು.
ಜ.13 ರ ಮಂಗಳವಾರ ರಾತ್ರಿ 9 ಗಂಟೆಗೆ ವಿಜೃಂಭಣೆಯಿಂದ ಶ್ರೀ ಸ್ವಾಮಿಯ ಹಾಗೂ ಶ್ರೀ ಚೌಡಮ್ಮ ದೇವಿಯ ಜಾತ್ರೆಯ ಮಹಾಪೂಜೆ ನೆರವೇರಲಿದೆ. ಜ.14 ರ ಬುಧವಾರ ಬೆಳಿಗ್ಗೆ ಶ್ರೀ ಕಲ್ಲೇಶ್ವರ ಸ್ವಾಮಿಯ ಹೂವಿನ ಹಾರ ಹಾಗೂ ಬಾವುಟ ಮತ್ತು ಶ್ರೀ ಚೌಡಮ್ಮ ದೇವಿಯ ಹಾರ ಹರಾಜು ಮಾಡಲಾಗುವುದು ಎಂದು ಧರ್ಮದರ್ಶಿ ಬಣಕಾರ ಸುರೇಶ್ ನಾಯ್ಕ ತಿಳಿಸಿದ್ದಾರೆ.
Leave a comment