Home ಕ್ರೀಡೆ ಉಚ್ಚಂಗಿದುರ್ಗ  : ಜೈ ದುರ್ಗಾ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆ

ಉಚ್ಚಂಗಿದುರ್ಗ  : ಜೈ ದುರ್ಗಾ ಕ್ರಿಕೆಟ್ ಪಂದ್ಯಾವಳಿ

Share
ಉಚ್ಚಂಗಿದುರ್ಗ  : ಜೈ ದುರ್ಗಾ ಕ್ರಿಕೆಟ್ ಪಂದ್ಯಾವಳಿ
Share

ಹರಪನಹಳ್ಳಿ : ಯಾವುದೇ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾಸಕ್ತಿಯಿಂದ ಪಾಲ್ಗೊಳ್ಳುವುದು ಮುಖ್ಯವೆಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಜೈ ದುರ್ಗಾ ಕ್ರಿಕೆಟರ್ಸ್ ವತಿಯಿಂದ 4ನೇ ಬಾರಿ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವಿಫುಲ ಅವಕಾಶಗಳಿರುತ್ತವೆ. ಆದರೆ ಸರಿಯಾದ ಮಾರ್ಗದರ್ಶನವಿಲ್ಲದೇ ಅವಕಾಶ ವಂಚಿತರಾಗಿ ಬಿಡುತ್ತಾರೆ. ಪ್ರತಿಭಾವಂತ ಕ್ರೀಡಾಪಟುಗಳು ಉತ್ತಮವಾಗಿ ಸ್ಪರ್ಧಿಸಬೇಕು. ಗ್ರಾಮೀಣ ಭಾಗದ ಮಕ್ಕಳು ಉನ್ನತ ಸ್ಥಾನಕ್ಕೆ ಬೆಳೆಯಬೇಕು ಎಂದು ತಿಳಿಸಿದರು.

ಉಚ್ಚಂಗಿದುರ್ಗಕ್ಕೆ ಸುಸಜ್ಜಿತ ಕ್ರೀಡಾಂಗಣ ಅವಶ್ಯಕತೆಯಿದೆ, ಮುಂಬರುವ ಚುನಾವಣೆಯಲ್ಲಿ ಜನರು ಸಹಕಾರ ನೀಡಿ ಗೆಲ್ಲಿಸಿದರೆ, ಉತ್ತಮ ಕ್ರೀಡಾಂಗಣ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಜ.10 ರಿಂದ ಆರಂಭವಾಗಿದ್ದ ಕ್ರೀಡಾಕೂಟ ಜ.12ಕ್ಕೆ ಮುಕ್ತಾಯಗೊಂಡವು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬೇವಿನಹಳ್ಳಿ ಪಿ.ಕೆಂಚನಗೌಡ್ರು, ಕಮ್ಮತ್ತಹಳ್ಳಿ ಮುರುಗೇಶ್, ಧರ್ಮನಾಯಕ್, ಚಟ್ನಿಹಳ್ಳಿ ಬಸವರಾಜ್, ಅಣಜಿಗೆರೆ ಮಲ್ಲಿಕಾರ್ಜುನ್, ಉಚ್ಚಂಗಿದುರ್ಗದ ಯುವರಾಜ್, ಅಂಜಿನಪ್ಪ, ಬಸಣ್ಣ, ಫಣಿಯಾಪುರದ ಲಿಂಗರಾಜ್, ಪಿಡಿಒ ಸಿದ್ದೇಶ್ ಹಾಗೂ ಕ್ರೀಡಾಪಟುಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಕ್ರೀಡೆ

ಹರಪನಹಳ್ಳಿ : ಸಮತ ರೆಸಾರ್ಟ್‍ನಲ್ಲಿ ವಿಚಾರಗೋಷ್ಠಿ

ಹರಪನಹಳ್ಳಿ : ರಾಜಕೀಯ ಪ್ರಜಾಪ್ರಭುತ್ವ ದುರ್ಬಳಕೆ ಆಗುತ್ತಿದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಜಾತಿ ಮೇಲೆ...

Homeಕ್ರೀಡೆ

ಸಮತಾ ರೆಸಾರ್ಟ್ ಪ್ರಗತಿಪರ‌‌ ಚಿಂತನೆಗಳ ಕೇಂದ್ರ

ಹರಪನಹಳ್ಳಿ : ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣನವರು ತಮ್ಮ...

renukadevi
Homeಕ್ರೀಡೆ

ಪರಿಸರ ಜಾಗೃತಿಗಾಗಿ ದಾವಣಗೆರೆಯಲ್ಲಿ ಸೈಕಲ್ ಜಾಥಾ

ದಾವಣಗೆರೆ  : ಯುವಜನರು ಮತ್ತು ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ...

kannada
Homeಕ್ರೀಡೆ

ಹರಪನಹಳ್ಳಿಯಲ್ಲಿ ಗಮನ ಸೆಳೆದ ಬೀಳ್ಕೊಡುಗೆ

ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.