ಹರಪನಹಳ್ಳಿ : ತಾಲ್ಲೂಕಿನ ಬಾಗಳಿ ಗ್ರಾಮದ ರಾಮಾನಗೌಡ್ರು ಪ್ರೌಢಶಾಲೆಯಲ್ಲಿ ಬಳ್ಳಾರಿ ನೆಹರು ಕೇಂದ್ರ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘದ ಸಹಯೋಗದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕೊ,ಕೊ, ವಾಲಿಬಾಲ್, ಸ್ಲೋ ಸೈಕಲ್, 100 ಮೀ, ಓಟ, ವೈಟ್ ಲಿಫ್ಟಿಂಗ್ ಕ್ರೀಡೆಗಳು ಬಾಲಕ-ಬಾಲಕಿಯರಿಗೆ ಆಯೋಜಿಸಲಾಗಿತ್ತು. ವಿಜೇತರಾದ ತಂಡಗಳಿಗೆ ಕ್ರೀಡಾ ಸಾಮಾಗ್ರಿ ಕಿಟ್, ಬಹುಮಾ, ಪ್ರಶಸ್ತಿ ಪತ್ರ ವಿತರಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ಸಂಘದ ಕಾರ್ಯದರ್ಶಿ ಶ್ವೇತಾ ಮಾತನಾಡಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ನಿರ್ಮಾಣ ಆಗುತ್ತದೆ ಎಂದರು. ಮುಖ್ಯ ಶಿಕ್ಷಕ ಸುರೇಶ್, ದೈಹಿಕ ಶಿಕ್ಷಕ ಲೋಕೇಶ, ಅರ್ಚನಾ, ಗೋಣಿಬಸಪ್ಪ ಇದ್ದರು.
Leave a comment