ಹಿಂದೂ ಸಮ್ಮೇಳನಕ್ಕೆ ಬಿಜೆಪಿ ಮುಖಂಡರಿಂದ ಬೈಕ್ ರ್ಯಾಲಿ

Sirisuddi Kannada
1 Min Read

ಹರಪನಹಳ್ಳಿ : ನಗರದ ಹಳೇ ಬಸ್ ನಿಲ್ದಾಣದಲ್ಲಿ ಫೆ.6ರ ಶುಕ್ರವಾರ ಜರುಗಲಿರುವ ತಾಲ್ಲೂಕು ಹಿಂದೂ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಆಗಮಿಸಬೇಕು ಎಂದು ಬಿಜೆಪಿ ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.

ನಗರದ ಶ್ರೀರಾಮ ಮಂದಿರ ದೇವಸ್ಥಾನ ಸಭಾಂಗಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಜರುಗಿದ ಬಿಜೆಪಿ ಮುಖಂಡರ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ, ಸಮ್ಮೇಳನದ ದಿನ ಸಂಜೆ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯ ಚುನಾವಣೆಯಲ್ಲಿ ಪೂರ್ವ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಸಂಘಟನೆ ಬಲಿಷ್ಠಗೊಳಿಸಲು ನಿರ್ಧರಿಸಿದರು.

ಮುಖಂಡರಾದ ಸತ್ತೂರು ಹಾಲೇಶ್, ಕಣಿವಿಹಳ್ಳಿ ಮಂಜುನಾಥ, ಮೈದೂರು ಮಲ್ಲಿಕಾರ್ಜುನ, ಮಂಜ ನಾಯ್ಕ್,  ಹುಣಸಿಹಳ್ಳಿ ಪ್ರಕಾಶ್, ಪ್ರಾಣೇಶ್ ,ಚೆನ್ನನಗೌಡ,  ಬಾರಿಕರ ರವಿ, ಅಕ್ಷಯ್ ಕುಮಾರ್ ಪಿ ವಿ, ಕುಣೇಮಾದಿಹಳ್ಳಿ ಮಂಜುನಾಥ್, ಡಾಕ್ಟರ್ ಮಂಜುನಾಥ್ ಲಕ್ಷ್ಮೀಪುರ ,ಮತ್ತಿಹಳ್ಳಿ ಮುನೇಗೌಡ, ಶ್ರೀಪತಿ, ಎಂ ಪಿ ಹಾಲೇಶ್ ಸಾಸ್ವಿಹಳ್ಳಿ, ಗುರುಬಸವರಾಜ್, ಬೂದಿ ನವೀನ್, ವೆಂಕಟೇಶ್ ನಾಯ್ಕ್, ಮಹೇಶ್ ಜವಳಿ, ಶಿಂಗ್ರಿಹಳ್ಳಿ ಮರಿಯಣ್ಣ, ರೇವಣಗೌಡ, ದೇವರಾಜ್ ,ನಂದಿಬೇವೂರ ಚಾರೆಪ್ಪ,ಯಡಿಹಳ್ಳಿ ಅಂಜಿನಪ್ಪ ಇದ್ದರು.

Share This Article
Leave a Comment