ಹರಪನಹಳ್ಳಿ : ಉದ್ಯೋಗ ಖಾತ್ರಿ ಯೋಜನೆ ಮೂಲ ಸ್ವರೂಪ ಬದಲಾಯಿಸುವ ಕೇಂದ್ರ ಸರ್ಕಾರ ಕ್ರಮ ಖಂಡಿಸಿ ಇಲ್ಲಿಯ ಭಾರತ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ತಾಲ್ಲೂಕು ಆಡಳಿತ ಸೌಧದ ಆವರಭಣದಲ್ಲಿ ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು, ಕೇಂದ್ರ ಸರ್ಕಾರ ಹೊಸ ಕಾಯಿದೆ ತರಲು ಹೊರಟಿರುವುದು ಕೂಲಿ ಕಾರ್ಮಿಕರಿಗೆ ಸೀಮಿತ ಕೆಲಸದ ಹಕ್ಕು ನಿರಾಕರಿಸುತ್ತಿದೆ. ವಿಬಿ ಜಿ-ರಾಮ್-ಜಿ ಕಾಯಿದೆಯಾಗಿ ಮಾರ್ಪಡಿಸಿರುವ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸಿಪಿಐ ತಾಲ್ಲೂಕು ಕಾರ್ಯದರ್ಶಿ ಎಚ್.ರಮೇಶನಾಯ್ಕ, ಎಐಕೆಎಸ್ ಜಿಲ್ಲಾಧ್ಯಿಕ್ಷ ಗುಡಿಹಳ್ಳಿ ಹಾಲೇಶ್, ಬಳಿಗನೂರು ಕೊಟ್ರೇಶ್, ಭಾಗ್ಯಮ್ಮ, ದೊಡ್ಡಬಸವರಾಜ, ಹರಿಯಮ್ಮನಹಳ್ಳಿ ಬಸವರಾಜ, ಹನುಮಂತನಾಯ್ಕ ಇತರರಿದ್ದರು.
