ಚಿನ್ನದ ಪದಕ ಪಡೆದ ಕ್ರೀಡಾಪಟು ನಂದೀಶಗೆ ಸನ್ಮಾನ

Sirisuddi Kannada
0 Min Read

ಹರಪನಹಳ್ಳಿ : ರಾಷ್ಟ್ರಮಟ್ಟದ  ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಂಗಾರದ ಪದಕ ಪಡೆದಿರುವ ಹರಪನಹಳ್ಳಿ ನವೋದಯ ಕ್ರೀಡಾಸಂಸ್ಥೆಯ ಕ್ರೀಡಾಪಟು ಜಿ.ಕೆ.ನಂದೀಶ್ ಅವರನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸನ್ಮಾನಿಸಿದರು.

ಚಿನ್ನದ ಪಡೆದ ಕ್ರೀಡಾಪಟು ನಂದೀಶಗೆ ಸನ್ಮಾನ

ಕೊ ಖೋ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿ.ಕೆ.ನಂದೀಶ್ ಅವರು ಚಿನ್ನದ ಪದಕ ಪಡೆದು ಸ್ವ ಗ್ರಾಮಕ್ಕೆ ವಾಪಾಸು ಆಗಿದ್ದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ನಂದೀಶ್ ಅವರು, ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ತರಬೇತುದಾರರಾದ ಶಿಕ್ಷಕಿ ನಂದಿನಿ ಒಡೆಯರ್, ನವೋದಯ ಕ್ರೀಡಾಸಂಸ್ಥೆಯ ಪದಾಧಿಕಾರಿಗಳಿದ್ದರು.

 

Share This Article
Leave a Comment