ಹರಪನಹಳ್ಳಿ: ಹರಪನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಹೆಚ್.ಕೆ.ಹಾಲೇಶ್ ಅವರು 58ನೇ ವರ್ಷದ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೇಕ್ ಕತ್ತರಿಸಿದ ಹೆಚ್.ಕೆ.ಹಾಲೇಶ್ ಅವರಿಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಆಗಮಿಸಿ ಸಿಹಿ ತಿನ್ನಿಸುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಕೋರಿದರು.
ವಾಲ್ಮೀಕಿ ನಗರದ ವೀರ ಗಂಗಾಧರ ಹಾಲಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಕೋಡಿಹಳ್ಳಿ ಭೀಮಪ್ಪ, ಚಂದ್ರಶೇಖರ ಭಟ್, ಪೂಜಾರ ಶಶಿಧರ, ಎಚ್.ಬಿ.ಪರಶುರಾಮಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ವೈ.ಡಿ.ಅಣ್ಣಪ್ಪ, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚೆಂಗೆಪ್ಪ, ಸುರೇಂದ್ರಬಾಬು, ಎ.ಮೂಸಾಸಾಬ್, ನಿಚ್ಚವ್ವನಹಳ್ಳಿ ಪರಶುರಾಮ, ಪೂಜಾರ ಅರುಣ್, ಸುಕ್ರುಸಾಬ್, ಮುತ್ತಿಗಿ ಜಂಬಣ್ಣ, ಗಿಡ್ನಳ್ಳಿ ನಾಗರಾಜ್, ಕರಿಯಪ್ಪ, ರಾಜಪ್ಪ, ತಿರುಪತಿ, ಬಸಪ್ಪ, ನಂದಿಬೇವೂರು ಶಿವಕುಮಾರ, ವೆಂಕಟೇಶ ನಾಯ್ಕ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದು ಶುಭಕೋರಿದರು.