ಹರಪನಹಳ್ಳಿ : ನಗರ ಪ್ರದೇಶ ಒಳಗೊಂಡು ತಾಲ್ಲೂಕಿನ ವಿವಿಧೆಡೆ ಮುಸ್ಲೀಂರು ರಂಜಾನ್ ಉಪವಾಸ ಅಂತ್ಯಗೊಳಿಸಿ ಈದ್ ಉಲ್ ಫ್ರಿತ್ ಹಬ್ಬವನ್ನು ಸಡಗರ ಸಂಭ್ರಮದಿಂದ ಶನಿವಾರ ಆಚರಿಸಿದರು.
ನಗರದ ಹಡಗಲಿ ರಸ್ತೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಆಲಿ ಸುನ್ನಿ ಜಮಾತ್, ತಬಲಿಕ್ ಜಮಾತ್ ಪಂಗದ ಸಾವಿರಾರು ಜನರು ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮೌಲ್ವಿ ಸರ್ಖಾಜಿ ಫೀರಸಾಬ್ ಅವರು, ಈದ್ ಉಲ್ ಫ್ರಿತ್ ನಿಮಿತ್ತ ಪ್ರಾರ್ಥನೆ ಬೋಧಿಸಿದರು. ಅವರ ವಾಣಿ ಅನುಸರಿಸಿದ ಮುಸಲ್ಮಾನರು ಸಾಮೂಹಿಕ ಧ್ವನಿಗೂಡಿಸಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದರು. ರಂಜಾನ್ ಹಬ್ಬದ ಮಹತ್ವ ಮತ್ತು ಅದರ ಆಚರಣೆಯ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮೈದಾನದಲ್ಲಿ ಹಲವು ಸಂಘಟನೆಗಳ ಪದಾಧಿಕಾರಿಗಳು ಕುಡಿಯುವ ನೀರು, ತಂಪು ಪಾನೀಯ, ಶರಬತ್ ಉಚಿತವಾಗಿ ವಿತರಿಸಿದರು.
ಹಿರಿಯ ಮುಖಂಡರಾದ ಸಿ.ಜಾವಿದ್, ಬೇಲ್ದಾರ ಭಾಷಸಾಬ್, ಪಿ.ಮೆಹಬೂಬ್ ಸಾಬ್, ಎಸ್.ಕೆ.ಶಮಿವುಲ್ಲಾ, ಹೊಂಬಳಗಟ್ಟಿ ಮಕರಬ್ಬಿ ಶರೀಫ್, ಸಿರಾಜುದ್ದಿನ್, ಮುಜಿಬರ್ ರೆಹಮಾನ್, ಎಂ.ದಾದಾಪೀರ, ಜೆ.ಜಬಿವುಲ್ಲಾ, ಜಾಕೀರ ಹುಸೇನ್, ಚಮನ್ ಸಾಬ್, ಹೈದರಅಲಿ, ಮೌಲನಾ ಸಾಬ್ ಇತರರಿದ್ದರು.
ಹೊಂಬಳಗಟ್ಟಿಯಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಷರೀಫ್ ಮಕರಬ್ಬಿ, ಮಹಬೂಬ್ ಸಾಹೇಬ್, ಮುತವಲ್ಲಿ ಜಮಾತ್, ಉಪಾಧ್ಯಕ್ಷ ಯಹ್ಯಾ, ಎಂ ಅಬ್ದುಲ್ಲಾ , ಫಜಲು ಸಾಹೇಬ್, ಗನಿ ಸಾಹೇಬ್, ಸಲೀಂ ಇದ್ದರು. ನಂದಿಬೇವೂರಿನಲ್ಲಿ ಜರುಗಿದ ಮೆರವಣಿಗೆಯಲ್ಲಿ ಮುಖಂಡರಾದ ಬುಡೇನ್ ಸಾಬ್, ಇಮಾಮ್ ಸಾಬ್, ಬಡೇ ಸಾಬ್, ನಾಲಬಂದಿ ಶಫಿಸಾಬ್ ಭಾಗವಹಿಸಿದ್ದರು. ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ, ರಾಮನಗರ, ಯು.ಕಲ್ಲಳ್ಳಿ, ಹನುಮನಹಳ್ಳಿ ಹಾಗೂ ಮಾದಿಹಳ್ಳಿ ಗಳಲ್ಲಿ ಪ್ರಾರ್ಥನೆ ಜರುಗಿತು. ಮೌಲ್ವಿ ಮೌಲಾನ್ ಮಹಮ್ಮದ್ ಅದಿಲ್, ಜಾಮೀಯ ಮಸೀದಿ ಅಧ್ಯಕ್ಷ ಬಿ.ಅಬೀಬ್ ಸಾಹೇಬ್, ಕಾರ್ಯದರ್ಶಿ ಖಾಜಿ ಮಹಮ್ಮದ್, ಮುಖಂಡರಾದ ಅಬ್ದುಲ್ ಸಾಹೇಬ್, ಅದಾಮ್ ಸಾಹೇಬ್, ಐ.ಸಲಾಂ ಸಾಹೇಬ್, ಎಂ.ಹಸೇನ್ ಸಾಹೇಬ್, ಎ.ಮಹಾಬ್ದುಲ್ ಸಾಹೇಬ್, ಬಿ.ಸಲಾಂ ಸಾಹೇಬ್ ಇದ್ದರು.
