ಪತ್ರಕರ್ತರು ಪಕ್ಷ ಭೇದವಿಲ್ಲದ ಪ್ರಚಾರ ನೀಡಲಿ

Sirisuddi Kannada
2 Min Read
ದಾವಣಗೆರೆ : ಸಂವಿಧಾನದ ನಾಲ್ಕನೆಯ ಅಂಗ  ಈ ಪತ್ರಿಕಾ ರಂಗವೂ ಸಮಾಜದಲ್ಲಿ ಸರಿ ತಪ್ಪುಗಳನ್ನು ಪಕ್ಷ ಭೇದವಿಲ್ಲದೆ ಪ್ರಚಾರ ನೀಡಬೇಕಾಗುತ್ತದೆ  ಎಂದು ಕರ್ನಾಟಕ ಕಾರ್ಯನಿರತ  ಪತ್ರಕರ್ತರ  ಜಿಲ್ಲಾ ಅಧ್ಯಕ್ಷರಾದ ಇ. ಎಂ. ಮಂಜುನಾಥ್ ಹೇಳಿದರು.
ದಾವಣಗೆರೆ ಜಿಲ್ಲಾ ಶಿವಸಿಂಪಿ  ಸಂಘ ಮತ್ತು ದಾವಣಗೆರೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟದ ಸಹಯೋಗದಲ್ಲಿ  ಶಿವಸಿಂಪಿ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ  ಸನ್ಮಾನವನ್ನು ಸ್ವೀಕರಿಸಿದ ಅವರು  ಶಿವಸಿಂಪಿ ಸಮಾಜ  ಹಿಂದುಳಿದ  ಸಮಾಜವಾಗಿದೆ  ನಿಮ್ಮ ಸಮಾಜವನ್ನು  ಸರ್ಕಾರ ಗುರುತಿಸುವಂಥ ಕೆಲಸ ಆಗಬೇಕಾಗಿದೆ  ಎಂದು  ತಿಳಿಸಿದರು.
40 ವರ್ಷಗಳಿಂದ  ಈ ಪತ್ರಿಕಾ ರಂಗದಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ. ಎಲ್ಲಾ ರಾಜಕೀಯ ಮುಖಂಡರು, ಮತ್ತು ಸಮಾಜ ಬಾಂಧವರು ಸ್ಪಂದಿಸುತ್ತಾರೆ. ಶಿವಸಿಂಪಿ ಸಮಾಜದ ಎಲ್ಲಾ ಪದಾಧಿಕಾರಿಗಳು ನನ್ನ ಸ್ನೇಹಿತರಂತಿದ್ದಾರೆ, ಎಲ್ಲಾ ಸಮಾಜದಂತೆ ನಿಮ್ಮ ಸಮಾಜವು ಬೆಳೆಯಲಿ  ಮತ್ತು ಪತ್ರಕರ್ತರಿಗೆ  ಅನುಕೂಲ ವಾಗುವಂತೆ ಸಮುದಾಯ ಭವನ ನಿರ್ಮಾಣವಾಗಬೇಕು ಎಂಬುದೇ ನನ್ನ ಆಶಯವಾಗಿದೆ ಎಂದು  ರಾಜ್ಯ ಸಂಘದ ಪ್ರತಿನಿಧಿಯಾಗಿ  ಆಯ್ಕೆಯಾಗಿದ್ದ ಕೆ. ಚಂದ್ರಣ್ಣನವರು  ಮಾತನಾಡಿದರು.
ನೂತನ ಪ್ರಧಾನ ಕಾರ್ಯದರ್ಶಿ  ಎನ್. ವಿ. ಬದ್ರಿನಾಥ್ ಮಾತನಾಡಿ ಕಳೆದ ಸಾರಿ ನಾನು ಸಂಘದಲ್ಲಿ ಖಜಾಂಚಿಯಾಗಿ  ಕಾರ್ಯನಿರ್ವಹಿಸಿದ್ದೇನೆ  ಈಗ ಪ್ರಧಾನ ಕಾರ್ಯದರ್ಶಿಯಾಗಿ  ನನ್ನ ಪತ್ರಿಕ ಮಿತ್ರರೆಲ್ಲ ಆಯ್ಕೆ ಮಾಡಿದ್ದಾರೆ. ಶಿವಸಿಂಪಿ ಸಮಾಜವು  ಅಭಿನಂದಿಸಿ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ನಮ್ಮ ಸಂಘದ ಕಾರ್ಯಕ್ರಮನ್ನು ಮಾಡುವುದರ ಮೂಲಕ ನಿಭಾಯಿಸುತ್ತೇನೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.
ಖಜಾಂಚಿಯಾಗಿ ಆಯ್ಕೆಯಾಗಿರುವ ಜಿ.ಎಸ್ ವೀರೇಶ್ ಪತ್ರಕರ್ತರ ಸಂಘದಲ್ಲಿ  ಹಿರಿಯರು ಏನು ಮಾರ್ಗ ಸೂಚಿ ಹಾಕಿ ಕೊಟ್ಟಿದ್ದಾರೆ  ಅವರ ಮಾರ್ಗದರ್ಶನದಲ್ಲಿ ಜವಾಬ್ದಾರಿಯುತವಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು  ಸನ್ಮಾನವನ್ನು ಸ್ವೀಕರಿಸಿದ ಅವರು ಮಾತನಾಡಿದರು.
ನೂತನವಾಗಿ  ಆಯ್ಕೆಯಾದ  ಪದಾಧಿಕಾರಿಗಳಿಗೆ ಸನ್ಮಾನಿಸಿ ಸಮಾಜದಲ್ಲಿ ಎಲ್ಲರನ್ನೂ ಜವಾಬ್ದಾರಿಯಿಂದ ಗುರುತಿಸುವ ಕೆಲಸ ಪತ್ರಕರ್ತರದಾಗಿರುತ್ತದೆ
ಪತ್ರಕರ್ತರಿಗೆ ಜಾತಿ ಭೇದವಿರುವುದಿಲ್ಲ ಎಲ್ಲಾ ಜಾತಿಯವರನ್ನು  ಸಮಾನವಾಗಿ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಅವರದಾಗಿರುತ್ತದೆ ಎಂದು ಸಮಾಜದ ಗೌರವಧ್ಯಕ್ಷರಾದ ಬೂಸನೂರ್ ಗುರುಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಅಧ್ಯಕ್ಷರಾದ ಚಿಂಡೋಡಿ ಎಲ್. ಚಂದ್ರುದರ್ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,  ‘ಮಂಜುನಾಥ್ ಎರಡನೇ ಬಾರಿ ಆಯ್ಕೆ ಮಾಡಲಾಗಿದೆ ಇದಕ್ಕೆ ಅವರು ಮಾಡಿದ ಕೆಲಸ ಗಳು ಕಾರಣ ಸುಮಾರು ವರ್ಷಗಳಿಂದ ನಮ್ಮ ಅವರ ಒಡನಾಟ ಇದೆ ಸರಳ ಸಜ್ಜನ ವ್ಯಕ್ತಿ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲಿ’ ಎಂದು ತಿಳಿಸಿದರು.
 ಪ್ರಧಾನ ಕಾರ್ಯದರ್ಶಿ ಮಹೇಶ್ವರ ಬಿ ವಿ, ಕಾರ್ಯದರ್ಶಿ ಜ್ಞಾನೇಶ್ವರ್ ಜವಳಿ,ಜಗದೀಶ್ ಬಾವಿ ಕಟ್ಟಿ , ಮಲ್ಲಿಕಾರ್ಜುನ ಕಬ್ಬುರ್ , ಶಿವಕುಮಾರ್ ಬಿ.ಎಂ, ಹೊಲೂರ್ ವೀರೇಶ್, ಶೀಲಾ, ಹೊಲೂರ್ ತೀರ್ಥ್ ರಾಜ್ ಹಾಗೂ ಸಮಾಜ ಬಾಂಧವರು ಮತ್ತು ದಾವಣಗೆರೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ  ಬಿ. ವಿ. ರಾಜಶೇಖರ್, ಕಾಯಿ ಪೇಟೆ ಹಾಲೇಶ್, ಜಯಣ್ಣ, ಕೆ. ಎಸ್. ಗಂಗಾಧರ್, ಶಿವಮೂರ್ತಿ ಸ್ವಾಮಿ, ರಾಮಚಂದ್ರ, ಒಕ್ಕೂಟದ ವತಿಯಿಂದ  ಸನ್ಮಾನಿಸಿದರು.  ಹವ್ಯಾಸಿ ಪತ್ರಕರ್ತರು ಎನ್. ಕೆ. ಕೊಟ್ರೇಶ್   ಉಪಸ್ಥಿತರಿದ್ದರು.
Share This Article
Leave a Comment