ಹರಪನಹಳ್ಳಿ : ಶಾಲಾ ಕಾಲೇಜಿನ ಹಂತದ ವಿದ್ಯಾರ್ಥಿಗಳು ಮೊಬೈಲ್ ಮತ್ತು ದುಶ್ಚಗಳಿಂದ ದೂರವಿರಿ ಎಂದು ಪಿಎಸ್ಐ ವಿಜಯಕೃಷ್ಣ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಜಿ.ವಿ.ವಿ.ಡಿ.ಎಸ್. ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಕ್ಕಳ ದಿನಾಚರಣೆ ನಿಮಿತ್ತ ಸೈಬರ್ ಕ್ರೈಮ್, ಮಕ್ಕಳ ಸಂರಕ್ಷಣೆ, ಬಾಲ್ಯ ವಿವಾಹ, ರಸ್ತೆ ಅಪಘಾತ ತಡೆ, ಪೊಕ್ಸೊ ಪ್ರಕರಣ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು. ಮೊಬೈಲ್ ನೋಡುತ್ತಾ ಕಾಲಹರಣ ಮಾಡಬೇಡಿ. ಇದರಿಂದ ಸೈಬರ್ ಅಪರಾಧ ಹೆಚ್ಚಾಗುತ್ತಿವೆ.ಇದನ್ನು ತಡೆಯಲು 1932 ಅಥವಾ 112ಗೆ ಕರೆಮಾಡಿದರೆ , ತಕ್ಷಣ ಪೊಲೀಸರು, ಸಂಬಂಧಪಟ್ಟ ಇಲಾಖೆಯಿಂದ ಸ್ಪಂದನೆ ಸಿಗುತ್ತದೆ ಎಂದರು.
ಮುಖ್ಯಶಿಕ್ಷಕಿ ಶಾಂತಕುಮಾರಿ, ಸಹ ಶಿಕ್ಷಕರಾದ ರಘು, ರೇಖಾ, ರಾಜೇಶ್ವರಿ, ಮಂಜುಳಾ, ಸಿದ್ದರಾಮನ ಗೌಡ, ಕಾವೇರಿ, ಅರ್ಪಿತಾ, ರವಿನಾಯ್ಕ್, ಪೂರ್ಯನಾಯ್ಕ್, ಮಹಾಂತೇಶ್, ರವಿಕುಮಾರ್ ಇದ್ದರು.
ಅರಸೀಕೆರೆ : ಪೊಲೀಸರಿಂದ ಜಾಗೃತಿ
Leave a Comment
Leave a Comment
