ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಹೋಬಳಿ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ನಾಗಪ್ಪ ಅವರು ಮಂಗಳವಾರ ನಡೆದ ಆಯ್ಕೆಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 14 ಜನ ಸದಸ್ಯ ಬಲ ಹೊಂದಿದೆ. ಹಿಂದಿನ ಅಧ್ಯಕ್ಷೆ ಬಿ.ರೇಣುಕಮ್ಮ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ ಬಯಸಿ ಡಿ.ನಾಗಪ್ಪ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ 11 ಜನ ಸದಸ್ಯರು ಹಾಜರಿದ್ದರು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಘೋಷಿಸಿದರು. ಬಳಿಕ ಕಾರ್ಯಕರ್ತರು ಸಂಭ್ರಮಾಚರಿಸಿದರು. ನೂತನ ಅಧ್ಯಕ್ಷ ನಾಗಪ್ಪ ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವುದು, ಸ್ವಚ್ಚತೆ, ಬೀದಿ ದೀಪದ ವ್ಯವಸ್ಥೆಗೆ ಆಧ್ಯತೆ ನೀಡಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೇಮಂತ್, ಉಪಾಧ್ಯಕ್ಷೆ ಕವಿತಾ ವೀರೇಶ್, ಸದಸ್ಯರಾದ ಮಂಜಮ್ಮ ಆನಂದಪ್ಪ, ಜಯ್ಯಮ್ಮ ಕೃಷ್ಣಪ್ಪ, ಬಸಮ್ಮ ಲೋಕಪ್ಪ, ಗೌರಮ್ಮ ಜಗದೀಶ್, ಆರ್. ಆಶಾ ಅಣ್ಣಪ್ಪ, ಕೆಂಚಪ್ಪ, ಜಿ. ಅಮರೇಶ್, ಟಿ.ಪಾಂಡುರಂಗಪ್ಪ, ಡಿ.ಶ್ರೀನಿವಾಸ್, ಕೆ. ಎನ್. ಸಿದ್ದೇಶ್, ಹೆಚ್. ಕರಿಬಸಪ್ಪ, ಮುಖಂಡರಾದ ಚಿಕ್ಕಕಬ್ಬಳ್ಳಿ ಕೊಟ್ರೇಶ್, ಪರುಸಪ್ಪ, ರಮೇಶ್, ಸುರೇಶ್ ಗೌಡ, ಚಂದ್ರುಗೌಡ, ಆಲೂರು ಶ್ರೀನಿವಾಸ, ಕೋಣನಕಟ್ಟೆ ಅಣ್ಣಪ್ಪ, ಹೊಸಕೋಟೆ ಆನಂದಪ್ಪ,ಎಂ.ಮಲ್ಲೇಶ್,ನಿವೃತ್ತ ಶಿಕ್ಷಕ ಶರಣಪ್ಪ,ಜಾತಪ್ಪ, ಹೆಚ್. ರಾಮಣ್ಣ, ಸಿದ್ದಲಿಂಗನಗೌಡ, ಕೆರೆಗುಡಿಹಳ್ಳಿ ಅಜ್ಜಪ್ಪ, ವೀರೇಶ್, ಪರಮೇಶ್, ಕಲ್ಲಪ್ಪ, ಸಿದ್ದಲಿಂಗಪ್ಪ, ಡಿ. ಬಸವರಾಜಪ್ಪ, ಕೆರೆಗುಡಿಹಳ್ಳಿ ಪೂಜಾರಿ ದುರುಗಪ್ಪ, ನಾಗರಾಜ್,ಭೋವಿ ಕೆಂಗಣ್ಣ, ಆಲೂರು ಶ್ರೀನಿವಾಸ್, ದ್ಯಾವಜ್ಜಿ ಉಚ್ಚಂಗೆಪ್ಪ, ಮ್ಯಾಸಗೇರಿ ವೆಂಕಟೇಶ ಹಾಗೂ ಗ್ರಾಮಸ್ಥರಿದ್ದರು.
