ತೌಡೂರು ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ

Sirisuddi Kannada
2 Min Read

ಹರಪನಹಳ್ಳಿ : ತಾಲ್ಲೂಕಿನ ತೌಡೂರು ಗ್ರಾಮದ ಎ.ಎಂ.ಕೆ.ವಿ.ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಜರುಗಿತು.‌ ತಾಲೂಕಿನ ತೌಡೂರು ಗ್ರಾಮದ ಎ.ಎಂ.ಕೆ.ವಿ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಕ್ರೈಮ್, ಮಕ್ಕಳ ಸಂರಕ್ಷಣೆ, ಬಾಲ್ಯ ವಿವಾಹ, ರಸ್ತೆ ಅಪಘಾತ ತಡೆ, ಫೋಸ್ಕೊ ಕೇಸಿನ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಿಎಸ್ಐ ವಿಜಯಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಕಲಿಯಬೇಕು, ಶಿಸ್ತಿನ ಜೊತೆಗೆ ಗುರಿಯನ್ನಿಟ್ಟುಕೊಳ್ಳಬೇಕು, ಈ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋಗಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ತಕ್ಷಣ 1930 ಕ್ಕೆ ಕರೆ ಮಾಡಬೇಕು,ಯಾವುದೇ ಅಪರಾಧಗಳು ನಡೆದರೆ 112 ಗೆ ಕರೆ ಮಾಡಿದರೆ ಕೇವಲ 10 ನಿಮಿಷದಲ್ಲಿ ನಿಮ್ಮ ಸ್ಥಳಕ್ಕೆ ಬರುತ್ತದೆ.       ವಿವಾಹವಾಗಲು ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸಾಗಿರಬೇಕು, ಗಂಡು ಮಕ್ಕಳಿಗೆ 21 ವರ್ಷ ವಯಸ್ಸಾಗಿರಬೇಕು, ಅದಕ್ಕಿಂತ ಮುಂಚೆ ವಿವಾಹವಾದರೆ ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಲಾಗುತ್ತದೆ ಎಂದರು.

ಮುಖ್ಯಶಿಕ್ಷಕಿ ಸೈಯದ್ ಮುಬಿನಾ ಮಾತನಾಡಿ,  ವಿದ್ಯಾರ್ಥಿಗಳು ದುಶ್ಚಟಗಳಿಂದ ಹಾಗೂ ಮೊಬೈಲ್ ನಿಂದ ದೂರವಿರಬೇಕು, ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಚನ್ನಾಗಿ ಓದಿ ಉನ್ನತ ಹುದ್ದೆಗೆ ಹೋಗಬೇಕು ಎಂದು ಹೇಳಿದರು.     ತಾಲ್ಲೂಕು ಸರ್ಕಾರಿ ನೌಕರರ  ಸಂಘದ ಅಧ್ಯಕ್ಷ ಎನ್.ಜಿ.ಮನೋಹರ್ ಮಾತನಾಡಿ,  ಯಾವುದೇ ಸಂದರ್ಭದಲ್ಲಿ  112 ಸಹಾಯವಾಣಿಗೆ ಕರೆ ಮಾಡಿದರೆ ಸುತ್ತಮುತ್ತ ಘಟನೆಗಳು ನಡೆದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆಹರಿಸುತ್ತಾರೆ. ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಬಾಳಬೇಕೆಂಬ ಅಸೆ ನಮಗೆ, ಅಪರಾಧ ತಡೆ ಮಾಸಾಚರಣೆ ಬಗ್ಗೆ ನಮ್ಮ ಶಾಲೆಗೆ ಬಂದು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಎಸ್.ಎಂ.ಸಿ.ಕೆ. ಕಾಲೇಜ್ ಪ್ರಾಚಾರ್ಯ ಪಿ.ದುರುಗೇಶ್ ಮಾತನಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ, ಇಂದಿನ ದಿನಗಳಲ್ಲಿ ನಮ್ಮ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಶಿಸ್ತಿದೆ, ಉತ್ತಮ ಶಿಕ್ಷಣ ಪಡೆದವರು ತಪ್ಪು ಮಾಡುವುದು ತುಂಬಾ ವಿರಳ, ಮೊಬೈಲ್ ನಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಎ.ಎಸ್ಐ ಸದಾನಂದ, ಶಿಕ್ಷಕರಾದ ಬಸವರಾಜ್, ಬಾಬು ರಾಜೇಂದ್ರ, ಶ್ರೀಕಾಂತ್, ಸಿದ್ದೇಶ್, ಕೂಳಹಳ್ಳಿ ಕೊಟ್ರೇಶ್, ಉಪನ್ಯಾಸಕರಾದ ಚಂದ್ರಪ್ಪ, ನಾಗರಾಜ್, ವಿನಾಯಕ್, ಪ್ರಭಾಕರ್ ಈಶಪ್ಪ, ಎ.ಹೆಚ್.ವಸಂತ್,  ರವಿನಾಯ್ಕ್, ಹರೀಶ್, ಸರ್ಕಾರಿ ಮಾದರಿ ಹಿರಿಯ  ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪರುಶುರಾಮ್, ಈಡಿಗರ ಅಜ್ಜಯ್ಯ ಹಾಗೂ ಶಾಲಾ ವಿದ್ಯಾರ್ಥಿಗಳಿದ್ದರು.

Share This Article
Leave a Comment