ಹೊಸಪೇಟೆ :  ವೈಕುಂಠಧಾಮ ನಿರ್ಮಾಣ ಭೂಮಿಪೂಜೆ

Sirisuddi Kannada
1 Min Read
ಹೊಸಪೇಟೆಯಲ್ಲಿ ವೈಕುಂಠಧಾಮ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ವಿಜಯನಗರ ( ಹೊಸಪೇಟೆ ) : ಹೊಸಪೇಟೆ ನಗರದ ಹಂಪಿ ರಸ್ತೆಯಿಂದ-ಭಟ್ರಳ್ಳಿ ಆಂಜನೇಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಗುಜ್ಜಲ್ ಜಯಲಕ್ಷ್ಮಿ ಲೇಔಟ್ ಪಕ್ಕದಲ್ಲಿರುವ ರುದ್ರಭೂಮಿಯ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೂ.4.30 ಕೋಟಿ ಅನುದಾನದಲ್ಲಿ ಆಧುನಿಕ ವಿದ್ಯುತ್, ಅನಿಲ ಚಿತಾಗಾರದ ವೈಕುಂಠಧಾಮ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ರಾಜ್ಯದ ಗಂಗಾವತಿ, ದಾವಣಗೆರೆ, ಗದಗ ಸೇರಿದಂತೆ ಐದು ನಗರಗಳಿಗೆ ಮಾತ್ರ ಈ ಆಧುನಿಕ ಚಿತಗಾರ ಕಾಮಗಾರಿಗೆ ಅನುದಾನ ಮಂಜೂರು ದೊರೆತಿದ್ದು ಅದರಲ್ಲಿ ಹೊಸಪೇಟೆ ನಗರ ಸೇರಿರುವುದು ವಿಶೇಷವಾಗಿದೆ. ಸತತ ಒಂದುವರೆ ವರ್ಷಗಳ ಪ್ರಯತ್ನದ ಫಲವಾಗಿ ನಗರಕ್ಕೆ ಈ ಸೌಲಭ್ಯ ದೊರಕುತ್ತಿದ್ದು, 4.5 ಎಕರೆ ಪ್ರದೇಶದಲ್ಲಿ ಈ ಆಧುನಿಕ ಚಿತ್ರಗಾರ ನಿರ್ಮಾಣವಾಗಲಿದೆ. ಇದರಿಂದ ಸಾರ್ವಜನಿಕರ ಹಣ ಉಳಿತಾಯವಾಗಲಿದೆ ಹಾಗೂ ಅಗತ್ಯ ಸ್ಥಳದಲ್ಲಿ ಕಾಂಪೌಂಡ್, ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಸಹಿತ ಅಗತ್ಯ ಮೂಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಲಾಗುವುದು.

ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ನ.25 ರಂದು ಇಂಧನ ಖಾತೆ ಸಚಿವರಾದ ಕೆ.ಜೆ.ಜಾರ್ಜ್ ಅವರ ಉಪಸ್ಥಿತಿಯಲ್ಲಿ ಬೈಲವದ್ದಿಗೆರೆಯ ರೂ.9.15 ಕೋಟಿ ವೆಚ್ಚದ 110/11 ಕೆ.ವಿ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆ ಹಾಗೂ ನಾಗೇನಹಳ್ಳಿ ರೂ.22.00 ಕೋಟಿ ರೂ ವೆಚ್ಚದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೂ.27.65 ಕೋಟಿ ರೂ ವೆಚ್ಚದಲ್ಲಿ ಎರಡು 110/11 ಕೆ.ವಿ ವಿದ್ಯುತ್ ಉಪ ಕೇಂದ್ರಗಳಿಗೆ ಭೂಮಿಪೂಜೆ ಕಾರ್ಯಕ್ರಮ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

Share This Article
Leave a Comment