ಎಚ್‍ಪಿಎಸ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ

Sirisuddi Kannada
1 Min Read

ಹರಪನಹಳ್ಳಿ : ಗಣರಾಜ್ಯೋತ್ಸವ ಕೇವಲ ಆಚರಣೆ ಮಾತ್ರವಲ್ಲ ಇದು ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವೂ ಹೌದು ಎಂದು ಪ್ರಾಂಶುಪಾಲರಾದ ಶಿವಗಂಗಮ್ಮ ಪಿ ಹೇಳಿದರು.

ನಗರದ ಹೆಚ್. ಪಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು

ದೇಶದ ಪ್ರಗತಿಗಾಗಿ ಪ್ರಾಮಾಣಿಕತೆ, ಶಿಸ್ತು, ದೇಶಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಕರು ಶಿಕ್ಷಣ, ಶ್ರಮ ಮತ್ತು ನೈತಿಕತೆಯ ಮೂಲಕ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಆದ್ದರಿಂದ ನಾವು ಎಲ್ಲರೂ ಒಗ್ಗಟ್ಟಾಗಿ ದೇಶದ ಸಂವಿಧಾನವನ್ನು ಗೌರವಿಸಿ, ಭಾರತವನ್ನು ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸೋಣ ಎಂದು ಪ್ರತಿಜ್ಞೆ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ ಹಿರಿಯ ಉಪನ್ಯಾಸಕರಾದ ಬಸವರಾಜ್. ಸಿ. ಎಸ್, ರವೀಂದ್ರ. ಕೆ.ಬಿ,ಹೆಚ್. ಶಿವಾನಂದ,ವೀರೇಶ್ ಎಮ್ ಎಸ್,ಎಮ್. ಬಿ. ಗೌಡರ್, ಸಂತೋಷ್. ಎಮ್ ಇ, ಸೌಮ್ಯ ಸಿ,ಗುರುಬಸವರಾಜ.ಹೆಚ್,ನಾಗರಾಜ್.ಎಸ್, ಚಿನ್ನಸ್ವಾಮಿ. ಎಮ್, ಮಾರುತಿ.ಎಮ್. ಇತರರು ಉಪಸ್ಥಿತರಿದ್ದರು.

 

Share This Article
Leave a Comment