ಕೇತೇಶ್ವರರ ಕಾಯಕ ನಮಗೆಲ್ಲಾ ಸ್ಪೂರ್ತಿ : ಡಾ.ಎಂ.ಪಿ.ವೀಣಾ 

Sirisuddi Kannada
1 Min Read
medar-harapanahalli-m-p-veena

ಹರಪನಹಳ್ಳಿ : ಮೇದಾರ ಕೇತೇಶ್ವರ ಜಯಂತಿ

ಹರಪನಹಳ್ಳಿ : ಹನ್ನೆರಡನೆ ಶತಮಾನದ ಬಸವಾದಿ ಶರಣರ ದಾಸೋಹ ಪ್ರಜ್ಞೆ ನಮಗೆಲ್ಲ ಸ್ಪೂರ್ತಿಯಾಗಿದೆ ಎಂದು ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಷ್ಟ್‍ ಅಧ್ಯಕ್ಷೆ ಡಾ.ಎಂ.ಪಿ.ವೀಣಾ ಮಹಾಂತೇಶ ಅಭಿಪ್ರಾಯಪಟ್ಟರು.

ನಗರದಲ್ಲಿ ಮೇದಾರ ಸಮಾಜದ ಬುಧವಾರ ಆಯೋಜಿಸಿದ್ದ ಶರಣ ಮೇದಾರ ಕೇತೇಶ್ವರ 895ನೇ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಜಕುಲದ ಕಾಯಕಕ್ಕೆ ಮಹತ್ವ ನೀಡಿದ ಶರಣ ಚಳವಳಿಯು, ಹಸಿದವರಿಗೆ ಅನ್ನ, ಜ್ಞಾನ ದಾಸೋಹ ಉಣಬಡಿಸಿದರು. ಅದರಲ್ಲೂ ಮೇದಾರ ಕೇತೇಶ್ವರ ಶರಣರು ಬಸವಣ್ಣನವರ ಆಪ್ತರಲ್ಲಿ ಒಬ್ಬರಾಗಿದ್ದರು. ಅವರ ಕಾಯಕ ಪ್ರಜ್ಞೆಗೆ ಅನುಭವ ಮಂಟಪವೇ ನಿಬ್ಬೆರಗಾಗಿತ್ತು. ಆಧುನಿಕ ಭರಾಟೆಯಲ್ಲಿ ಮೇದಾರರು ತಯಾರಿಸುತ್ತಿದ್ದ ಒಂದೊಂದೆ ವಸ್ತುಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚಂಗೆಪ್ಪ ಮಾತನಾಡಿ, ಗುಡಿ ಕೈಗಾರಿಕೆ, ಕೌಶಲಗಳಲ್ಲಿ ಮೇದಾರ ಸಮಾಜ ನೈಪುಣ್ಯತೆ ಪಡೆದಿದ್ದಾರೆ. ಆ ಕಲೆ ರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಆಧುನಿಕತೆಯ ಸ್ಪರ್ಧಾತ್ಮಕ ಯುಗದಲ್ಲಿ ಮೇದಾರ ಕಲೆಗೆ ದಕ್ಕೆಯಾಗದಂತೆ ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಬೇಕು ಎಂದರು.

ಮೇದಾರ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಎಂ.ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಪುರಸಭೆ ಸಸ್ಯ ಎಸ್.ಕಿರಣ್ ಕುಮಾರ ಮಾತನಾಡಿದರು. ಮೇದಾರ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಮಾರುತಿ, ಉಪಾಧ್ಯಕ್ಷ ಬಸವರಾಜ್, ತಿರುಕಪ್ಪ, ಮುಖಂಡರಾದ ಆರ್.ಲೋಕೇಶ್, ಕೆಂಗಳ್ಳಿ ಪ್ರಕಾಶ್, ಕೊಟ್ರಯ್ಯ, ಜೆಟ್ಟೆಪ್ಪ, ಕೌಟಿ ವಾಗೀಶ, ಕೆ.ಕೃಷ್ಣಪ್ಪ, ಚಿದಾನಂದ, ಮಂಜುನಾಥ, ಮಂಜುನಾಥ, ರಾಘವೇಂದ್ರ, ಮೈಲಾರಪ್ಪ, ರಾಜು, ಹುಲೇಗೇಶ್.ದುರುಗೇಶ ತೆಲಿಗಿ, ಮಹಿಳಾ ಘಟಕದ ಅಧ್ಯಕ್ಷೆ  ಅನೀತ ನಾಗರಾಜ್, ಸದಸ್ಯರಾದ ನೇತ್ರಾವತಿ, ಆರತಿ,ರೇಣುಕಮ್ಮ,ನರಸಮ್ಮ,ರುಕ್ಮಿಣಿ, ಇತರರಿದ್ದರು.

Share This Article
Leave a Comment