ಹರಪನಹಳ್ಳಿ : ತಾಲ್ಲೂಕಿನ ಸಾಸ್ಚಿಹಳ್ಳಿ ಬಳಿ ಬೈಕ್ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ಜರುಗಿದೆ.
ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ವಿಕಲಚೇತನರಪುನರ್ವಸತಿ ಕಾರ್ಯಕರ್ತರಾಗಿದ್ದ ಕುಣೆ ಮಾದಿಹಳ್ಳಿಯ ರವಿ (42), ಸಾಸ್ವಿಹಳ್ಳಿ ಗ್ರಂಥಾಲಯ ಸಿಬ್ಬಂದಿ ಶಿವಕುಮಾರ (32) ಸಾವನ್ನಪ್ಪಿದ ದುರ್ದೈವಿಗಳು. ಕೆಲಸ ಮುಗಿಸಿ ಸಾಸ್ವಿಹಳ್ಳಿಗೆ ತೆರಳುತ್ತಿದ್ದಾಗ ಬೈಕ್ ಪಲ್ಟಿಯಾಗಿದೆ ಅಥವಾ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

